ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿಯಲ್ಲಿ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಸಾವಿಗೀಡಾದ ಘಟನೆ ನಡೆಯಿತು.
ದೇವರಹೊಸಹಳ್ಳಿಯ ಚೌಡೇಶ್ ಮತ್ತು ರಾಧಾ ದಂಪತಿ ಪುತ್ರ ಧನ್ವಿಕ್. ಸೋಮವಾರ ರಾತ್ರಿ ಮನೆಯಲ್ಲಿ ಮಗು ಗ್ಯಾಸ್ ಸ್ಟೌವ್ನ ಪೈಪ್ ಹಿಡಿದು ಆಟವಾಡುವಾಗ ಸ್ಟೌವ್ ಮೇಲಿದ್ದ ಸಾಂಬರ್ ಪಾತ್ರೆ ಮಗುವಿನ ಮೈಮೇಲೆ ಬಿದ್ದಿದೆ.
ಬಿಸಿ ಸಾಂಬರ್ ಮೈಮೇಲೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment