ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಾಹಿತ ಸೋದರಿಯರಿಬ್ಬರೂ ನೇಣು ಬಿಗಿದು ಆತ್ಮಹತ್ಯೆ

ವಿವಾಹಿತ ಸೋದರಿಯರಿಬ್ಬರೂ ನೇಣು ಬಿಗಿದು ಆತ್ಮಹತ್ಯೆ

 



ಹಾಸನ : ಒಂದೇ ತಿಂಗಳಲ್ಲಿ ವಿವಾಹಿತ ಸೋದರಿಯರಿಬ್ಬರೂ ತಮ್ಮ ತಮ್ಮ ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. 


ಈ ಎರಡು ಸಹೋದರಿಯರ ಆತ್ಮಹತ್ಯೆಗೆ ಹಲವು ಅನುಮಾನಗಳಿದ್ದು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿರುವುದಾಗಿ ಮೃತ ಸೋದರಿಯರ ಪೋಷಕರು ದೂರಿದ್ದಾರೆ.


ಮೃತರನ್ನು ಸೌಂದರ್ಯ (21) ವರ್ಷ ಮತ್ತು ಆಕೆಯ ತಂಗಿ ಐಶ್ವರ್ಯ (19) ವರ್ಷ ಎಂದು ಗುರುತಿಸಲಾಗಿದೆ.


2021ರ ಜೂನ್ 8ರಂದು ಐಶ್ವರ್ಯ ತುಮಕೂರಿನ ಆಕೆಯ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ಆಕೆಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನಿಡಿದ್ದರೆಂದು ಆಕೆಯ ಪೋಷಕರು ಆರೋಪ ಮಾಡಿದ್ದರು.  


ಈ ಘಟನೆ ನಡೆದ ಕೇವಲ 17 ದಿನಗಳ ಅಂತರದಲ್ಲಿ ಅಂದರೆ ಜೂನ್ 25ಕ್ಕೆ ಸೌಂದರ್ಯ ಹೊಸನಗರದ ಕರಿಮನೆ ಕಾಡಿಗ್ಗೇರಿಯ ಅವಳ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم