ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ: ಹೋಲಿ ರೆಡೀಮರ್ ಚರ್ಚ್‌ ವತಿಯಿಂದ 70 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಹೋಲಿ ರೆಡೀಮರ್ ಚರ್ಚ್‌ ವತಿಯಿಂದ 70 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ



ಬೆಳ್ತಂಗಡಿ: ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ವತಿಯಿಂದ ಚರ್ಚ್ ವ್ಯಾಪ್ತಿಯಲ್ಲಿರುವ 70 ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಜೂ.3 ರಂದು ನಡೆಯಿತು.

ಈ ಸಂದರ್ಭದಲ್ಲಿ ಚರ್ಚ್‌ನ ಧರ್ಮಗುರುಗಳಾದ ರೆ.ಫಾ| ಜೋಸೆಫ್ ಕಾರ್ಡೊಜಾ  ರವರು ಫಲಾನುಭವಿಗಳಿಗೆ ಆಹಾರದ ಕಿಟ್ ಹಸ್ತಾಂತರಿಸಿ ಆಶೀರ್ವದಿಸಿದರು. ಹೋಲಿ ರಿಡೀಮರ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ರೆ.ಫಾ. ಜೇಸನ್ ಮೋನಿಸ್, ಹೋಲಿ ರಿಡೀಮರ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅಲೋಸಿಯಸ್ ಎಸ್  ಲೋಬೊ, ಕಾರ್ಯದರ್ಶಿ ಪೌಲಿನ್ ರೇಗೊ ಹಾಗೂ 18 ವಾಳೆಯ ಗುರಿಕಾರರುಗಳು ಉಪಸ್ಥಿತರಿದ್ದು, ಕಿಟ್ ಹಸ್ತಾಂತರಿಸುವಲ್ಲಿ ಸಹಕರಿಸಿದರು.

ಚರ್ಚ್ ಪಾಲನಾ ಮಂಡಳಿ  ಉಪಾಧ್ಯಕ್ಷ ಅಲೋಸಿಯಸ್ ಎಸ್  ಲೋಬೊ ಸ್ವಾಗತಿಸಿ, ಕಾರ್ಯದರ್ಶಿ ಪೌಲಿನ್  ರೇಗೊ ಧನ್ಯವಾದವಿತ್ತರು.



Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post