ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕ ಹರೀಶ್ ಪೂಂಜ ನೆರವು

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕ ಹರೀಶ್ ಪೂಂಜ ನೆರವು

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಪಾಂಗಾಳದಲ್ಲಿ ಹಾನಿಗೀಡಾದ ಮನೆಗಳು




ಬೆಳ್ತಂಗಡಿ: ತಾಲೂಕಿನ ಕಳೆಂಜ ಗ್ರಾಮದ ಪಾಂಗಾಳ ಎಂಬಲ್ಲಿ ಸುರಿದ ಭಾರಿ ಮಳೆಗೆ ಸುಮಾರು 8 ಮನೆಗಳು ಹಾನಿಗೊಳಗಾಗಿದ್ದ ಪ್ರದೇಶದ ಕುರಿತು ಕಳೆಂಜ ಗ್ರಾ.ಪಂ. ಜನಪ್ರತಿನಿಧಿಗಳು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದ ಕೂಡಲೇ, ತಕ್ಷಣ ಸ್ಪಂದಿಸಿದ‌ ಶಾಸಕರು ಧನಸಹಾಯ ಸಹಿತ ತುರ್ತು ಸ್ಪಂದನೆ ನೀಡಿದರು.


ಶಾಸಕ ಹರೀಶ್ ಪೂಂಜ ಅವರು ಬೆಂಗಳೂರು ತೆರಳಿದ್ದರಿಂದ  ಅವರು ಬೆಳ್ತಂಗಡಿ ಬಿಜೆಪಿ‌‌ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಹಾಗು ತಮ್ಮ ಆಪ್ತ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ‌ ಮೇರೆಗೆ ಬುಧವಾರ ಹಾನಿಗೊಳಗಾದ ಫಲಾನುಭವಿಗಳ ಮನೆಗಳನ್ನು ಪರಿಶೀಲನೆ ನಡೆಸಿ, ತುರ್ತು ದುರಸ್ತಿಗೆ ಧನ ಸಹಾಯ ಒದಗಿಸಲಾಯಿತು.


ಈ ಸಂದರ್ಭದಲ್ಲಿ ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಗ್ರಾ.ಪಂ. ಸದಸ್ಯರಾದ ಹರೀಶ್ ಕೆ.ಬಿ., ಗಂಗಾಧರ.ಕೆ, ಮಂಜುನಾಥ, ಲಲಿತಾಕ್ಷಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಶಿವಪ್ಪ ಗೌಡ, ನಿರಂಜನ್, ಕಾರ್ಯದರ್ಶಿ ರಾಘವ ಗೌಡ, ಮಹಾಶಕ್ತಿಕೇಂದ್ರ ಸದಸ್ಯ ಧನಂಜಯ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post