ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಗ್ರಾ; ಕಾರಿನ ಟೈರ್ ಸ್ಫೋಟ ; ನಾಲ್ಕು ಮಂದಿ ಸಾವು, ಇಬ್ಬರಿಗೆ ಗಾಯ

ಆಗ್ರಾ; ಕಾರಿನ ಟೈರ್ ಸ್ಫೋಟ ; ನಾಲ್ಕು ಮಂದಿ ಸಾವು, ಇಬ್ಬರಿಗೆ ಗಾಯ

 


ಆಗ್ರಾ -ಅತಿ ವೇಗದಲ್ಲಿ ದ್ದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಇದರಿಂದಾಗಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.


 ಇತ್ಮಾದ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ನದಿ ಸೇತುವೆ ಸಮೀಪದ ರೇಹಾನ್ಕಲ್ ಟೋಲ್ ಪ್ಲಾಜಾ ಸಮೀಪ ನಿನ್ನೆ ರಾತ್ರಿ ಸಂಭವಿಸಿದೆ.


ಅಪಘಾತದಲ್ಲಿ ಮೃತಪಟ್ಟ ಆಶೀಷ್, ಆರ್ಶದ್, ನಿಖಿಲ್ ಮತ್ತು ಹದಿನಾರು ವರ್ಷದ ಬಾಲಕ ಎಂದು ಗುರುತಿಸಲಾಗಿದೆ. 


ಆಗ್ರಾ ಸಿಟಿಯವರಾದ ಇವರೆಲ್ಲಾ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ವಾಪಾಸ್ ಮನೆಗೆ ತೆರಳುತ್ತಿದ್ದವರು ಎನ್ನಲಾಗಿದೆ.


ವೇಗವಾಗಿ ಸಂಚರಿಸುತ್ತಿದ್ದ ಕಾರಿನ ಒಂದು ಟೈರ್ ಸೋಟಗೊಂಡ ಕಾರಣ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವೃತ್ತ ನಿರೀಕ್ಷಕ ಅನೂಜ್‍ಕುಮಾರ್ ಶೈನಿ ತಿಳಿಸಿದ್ದಾರೆ.


ಕಾರಿನಲ್ಲಿ ಆರು ಮಂದಿ ಇದ್ದು ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದು ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

0 تعليقات

إرسال تعليق

Post a Comment (0)

أحدث أقدم