ವಿರಾಜಪೇಟೆ: ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆಯೊಂದು ಕಂಡಿಮಕ್ಕಿ ಬಾಳುಗೋಡು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಯ ಕಂಡಿಮಕ್ಕಿ ಗ್ರಾಮದ ನಿವಾಸಿ ಜಿ.ಆರ್.ಮಧು- ಜಿ.ಎಂ.ನಿಶಾ ದಂಪತಿ ಪುತ್ರಿ ಪವಿತ್ರ (14) ವರ್ಷದ ಮೃತಪಟ್ಟ ಬಾಲಕಿ.
ಪವಿತ್ರ ಅವರ ತಾಯಿ ನೀಶಾ ಅವರು ನಗರದ ಖಾಸಗಿ ಶಾಲೆಯಲ್ಲಿ ʻಡಿʼ ಗ್ರೂಪ್ ನೌಕರಿಯಲ್ಲಿದ್ದರು.
ಲಾಕ್ಡೌನ್ ನಿಂದ ಶಾಲೆ ಬಂದ್ ಆಗಿರುವುದರಿಂದ ಜೂ.29 ರಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 12.30 ಸಮಯದಲ್ಲಿ ಪವಿತ್ರಳಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಕೆಯ ಇಬ್ಬರು ಅಕ್ಕಂದಿರು ಕುಡಿಯಲು ನೀರು ಕೊಟ್ಟರು. ಅಷ್ಟರಲ್ಲೇ ಸ್ಥಳದಲ್ಲೇ ಕುಸಿದು ಬಿದ್ದಳು.
ಇದರಿಂದಾಗಿ ಅಸ್ವಸ್ಥಳಾದ ಪವಿತ್ರಳನ್ನು ಸಂಬಂಧಿಕರ ಸಹಾಯದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಪವಿತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಆಸ್ಪತ್ರೆಯ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಸಿ.ಬಿ.ಶ್ರೀಧರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಮೃತಳ ತಾಯಿ ನಿಶಾ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.
Post a Comment