ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಹಿತಿ, ಪತ್ರಕರ್ತ ಶೇಖರ ಅಜೆಕಾರ್ ನಿಧನ

ಸಾಹಿತಿ, ಪತ್ರಕರ್ತ ಶೇಖರ ಅಜೆಕಾರ್ ನಿಧನ



ಕಾರ್ಕಳ: ಸಾಹಿತಿ, ಲೇಖಕ ಶೇಖರ್ ಅಜೆಕಾರ್ (54) ಹೃದಯಾಘಾತದಿಂದ ಇಂದು (ಅ.31) ಬೆಳಿಗ್ಗೆ ನಿಧನ ಹೊಂದಿದರು.


ಶೇಖರ್ ಅಜೆಕಾರ್ ಅವರು 22 ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದರು.


ಶೇಖರ್ ಅವರು ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಮುಂಬೈನ ‘ಕರ್ನಾಟಕ ಮಲ್ಲ’, ಜನವಾಹಿನಿ, ಡೈಜಿವರ್ಲ್ಡ್, ಕನ್ನಡಪ್ರಭ, ತುಳುನಾಡು ವಾರ್ತೆ ಮತ್ತು ಉಷಾ ಕಿರಣಗಳಲ್ಲೂ ಸೇವೆ ಸಲ್ಲಿಸಿದ್ದಾರೆ.


ಸಂತಾಪ:

ಪತ್ರಕರ್ತರೂ ಸಾಹಿತಿಗಳೂ ಸಂಘಟಕರೂ ಆಗಿರುವ ಬಹುಮುಖ ಪ್ರತಿಭೆಯ ಡಾ|ಶೇಖರ ಅಜೆಕಾರ್ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ದೈವಾಧೀನರಾದರೆಂದು ತಿಳಿದು ಅತೀವ ದುಃಖವಾಯಿತು. ಕಾಸರಗೋಡಿನ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಇವರು ಕಾಸರಗೋಡಿನ ಎಲ್ಲ ಕನ್ನಡ ಸಮಾರಂಭಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವವರು. ನನ್ನ ಮನೆಗಂತೂ ಆಗಾಗ ಭೇಟಿ ನೀಡುತ್ತಿದ್ದ ಆತ್ಮೀಯ ಸ್ನೇಹಿತರು. ಅವರ ಅಗಲಿಕೆಯು ನಿಜವಾಗಿಯೂ ತುಂಬಲಾರದ ನಷ್ಟ. ಅವರ ದಿವ್ಯಾತ್ಮಕ್ಕೆ ಶ್ರೀ ಮಹಾವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನೂ ಶ್ರೀ ದೇವರು ಕರುಣಿಸಲೆಂದು ಪ್ರಾರ್ಥನೆ. ಓಂ ಶಾಂತಿಃ ಶಾಂತಿಃ ಶಾಂತಿಃ.

- ವಿ.ಬಿ. ಕುಳಮರ್ವ, ಕುಂಬ್ಳೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

0 Comments

Post a Comment

Post a Comment (0)

Previous Post Next Post