ಪೆರ್ಲ: ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿ ಕುಂಚಿನಡ್ಕ ನಿವಾಸಿ ನಾರಾಯಣ ಭಟ್ (69) ನಿಧನರಾಗಿದ್ದಾರೆ. ಇವರು ನಿವೃತ್ತ ಜೀವನದ ಬಳಿಕ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಪೆರ್ಲ ಸ.ನಾ. ಶಾಲಾ ನಿವೃತ್ತ ಅಧ್ಯಾಪಿಕೆ ಪುಷ್ಪಕುಮಾರಿ ಇವರ ಪತ್ನಿಯಾಗಿದ್ದು ಮಕ್ಕಳಾದ ವಿವೇಕ, ಆದರ್ಶ, ಆಶಾ, ಸೊಸೆಯಂದಿರಾದ ಸ್ವಾತಿ, ಸುಮನ, ಅಳಿಯ ಪ್ರಶಾಂತ ಕೃಷ್ಣ ಹಾಗೂ ಸಹೋದರ ಶ್ರೀಕೃಷ್ಣ ಭಟ್ ಎಂಬವರನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ.ಎಸ್. ಗಾಂಭೀರ ಹಾಗೂ ಸಮಿತಿ ಸದಸ್ಯರು, ಉದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment