ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟ್ರಾಫಿಕ್ ಫೈನ್ ಕಟ್ಟಲು ನೀಡಿದ್ದ ಗಡುವನ್ನು ಮತ್ತೆ 15 ದಿನಗಳ ಕಾಲ ವಿಸ್ತರಣೆ

ಟ್ರಾಫಿಕ್ ಫೈನ್ ಕಟ್ಟಲು ನೀಡಿದ್ದ ಗಡುವನ್ನು ಮತ್ತೆ 15 ದಿನಗಳ ಕಾಲ ವಿಸ್ತರಣೆ

 


ಬೆಂಗಳೂರು: ವಾಹನ ಸವಾರರ ಬೇಡಿಕೆ, ಟ್ರಾಫಿಕ್‌ ಕಮಿಷನರ್ ಮನವಿ ಹಿನ್ನಲೆ ರಿಯಾಯಿತಿ ಮೇಲೆ ಟ್ರಾಫಿಕ್ ಫೈನ್ ಕಟ್ಟಲು ನೀಡಿದ್ದ ಗಡುವನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. 


ಟ್ರಾಫಿಕ್ ದಂಡವನ್ನು ರಿಯಾಯಿತಿ ಮೇಲೆ ಪಾವತಿಸುವ ದಿನಾಂಕ ಫೆಬ್ರವರಿ 11ರಂದು ಮುಕ್ತಾಯವಾಗಿದೆ. ಅನೇಕ ಸವಾರರು ದಂಡ ಪಾವತಿಸಲು ಬಾಕಿಯಾಗಿದ್ದು, ರಿಯಾಯಿತಿ ಆಫರ್ ದಿನಾಂಕ ವಿಸ್ತರಿಸುವಂತೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಂಚಾರಿ ದಂಡ ಪಾವತಿ ಅವಧಿ 15 ದಿನಕ್ಕೆ ವಿಸ್ತರಿಸುವ ಪ್ರಸ್ತಾವನೆ ಮುಂದಿಡಲಾಯಿತು.


ಅಧಿಸೂಚನೆ ದಿನದಿಂದ 15ದಿನ ರಿಯಾಯಿತಿ ಮೇಲೆ ದಂಡ ಪಾವತಿಸಲು ಸಮಯಾವಕಾಶ ನೀಡುವ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲು ನಿರ್ಧರಿಸಲಾಯಿತು.


 ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಈ ಸಭೆ ನಡೆಯಿತು. 

0 Comments

Post a Comment

Post a Comment (0)

Previous Post Next Post