ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುದ್ಮುಲ್‌ ಗಾರ್ಡನ್‌ ಬಳಿ ಒಳಚರಂಡಿ ಕಾಮಗಾರಿಗೆ ಶಾಸಕ ಕಾಮತ್‌ ಚಾಲನೆ

ಕುದ್ಮುಲ್‌ ಗಾರ್ಡನ್‌ ಬಳಿ ಒಳಚರಂಡಿ ಕಾಮಗಾರಿಗೆ ಶಾಸಕ ಕಾಮತ್‌ ಚಾಲನೆ


ಮಂಗಳೂರು: ಕುದ್ಮುಲ್‌ ಗಾರ್ಡನ್‌ ಗಗನದೀಪ್ ಅಪಾರ್ಟ್‌ಮೆಂಟ್‌ ಬಳಿ ಒಳಚರಂಡಿ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಇಂದು (ಫೆ.23) ಶಿಲಾನ್ಯಾಸ ನೆರವೇರಿಸಿದರು.

ಇ;ಲ್ಲಿ ಹಲವು ವರ್ಷಗಳಿಂದ ಇದ್ದ ವ್ಯವಸ್ಥಿತ ಒಳಚರಂಡಿ ನಿರ್ಮಾಣದ ಬೇಡಿಕೆಯನ್ನು ಲೋಕೋಪಯೋಗಿ ಇಲಾಖೆಯ ಅನುದಾನದೊಂದಿಗೆ ಈಡೇರಿಸಲಾಗುತ್ತಿದೆ. ಕಾಮಗಾರಿಗಳು ಸಣ್ಣವು, ದೊಡ್ಡವು ಎಂಬ ಭೇದವಿಲ್ಲದೆ ಜನರಿಗೆ ಅನುಕೂಲ ಒದಗಿಸಿಕೊಡಲು ಮತ್ತು ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ತಾರತಮ್ಯವಿಲ್ಲದೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು. 

ಲೋಕೇಶ್‌ ಗುತ್ತಿಗೆದಾರ ಅವರು ಈ ಕಾಮಗಾರಿಯನ್ನು ನಡೆಸಿಕೊಡುತ್ತಾರೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕೀಲ ಕಾವ ಮತ್ತು ಕಿಶೋರ್ ಕೊಟ್ಟಾರಿ, ಬೂತ್ ಪ್ರಮುಖ ಸುಧಾಕರ್, ಪ್ರಸನ್ನ ದಡ್ಡಲ್ ಕಾಡ್, ಬೂತ್ ಅಧ್ಯಕ್ಷರಾದ ಜಯರಾಮ ಶೆಟ್ಟಿ, ಶ್ರೀನಿವಾಸ್ ಪೈ, ಬಿಜೆಪಿ ಮುಖಂಡರಾದ ಚರಿತ್ ಪೂಜಾರಿ, ಯಶ್ ರಾಜ್, ಜಯಚಂದ್ರ, ಸುನಂದ ಕೊಟ್ಟಾರ ಕ್ರಾಸ್, ರಾಕೇಶ್ ಕೊಟ್ಟಾರ ಕ್ರಾಸ್, ಉಮನಾಥ ಅಮೀನ್, ಮಾಲಾ ಆರ್, ಪ್ರೀತಮ್, ರವಿ ಕಾಪಿಕಾಡ್, ಮಹೇಶ್ ಶೆಣೈ, ನಾರಾಯಣ ಭಟ್, ಅನಂತ್ ಶೆಣೈ, ಸುಬ್ರಾಯ, ಆಶಾಲತಾ, ಸುನಂದ, ದಡ್ಡಲ್ ಕಾಡ್ ಮಹಿಳಾ ಮಂಡಳಿಯ ಸದಸ್ಯರು, ಹಿರಿಯರು ಕಾರ್ಯಕರ್ತ ಬಂಧುಗಳು ಸ್ಥಳೀಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post