ಬೆಂಗಳೂರು : ಸ್ಯಾಂಡಲ್ ವುಡ್ ನಿರ್ದೇಶಕ, ನಟ ಗುರುಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ನಿರ್ದೇಶಕ ಗುರು ಪ್ರಸಾದ್ ಅವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಗುರುಪ್ರಸಾದ್ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. ನಿರ್ದೇಶಕರಾಗಿ ಅವರ ಚೊಚ್ಚಲ ಚಿತ್ರ ಮಠ (2006) ಈ ಸಿನಿಮಾ ಅಂದು ಸಖತ್ ಸದ್ದು ಮಾಡಿತ್ತು.
ನಿರ್ದೇಶಕರಾಗಿ ಅವರ ಎರಡನೇ ಚಿತ್ರ ಎದ್ದೇಳು ಮಂಜುನಾಥ. ಈ ಎರಡೂ ಚಲನಚಿತ್ರಗಳನ್ನು ಉತ್ತಮ ವಿಮರ್ಶೆಗಳೊಂದಿಗೆ ಅನೇಕ ಪ್ರಶಸ್ತಿ ಪಡೆದುಕೊಂಡಿತ್ತು.
Post a Comment