ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಚ್ಲಂಗೋಡು ಎಎಲ್‌ಪಿ ಶಾಲೆ ಜನರಲ್ ಶತಮಾನೋತ್ಸವ ಸಂಭ್ರಮ, ನೂತನ ಕಟ್ಟಡ ಉದ್ಘಾಟನೆ

ಇಚ್ಲಂಗೋಡು ಎಎಲ್‌ಪಿ ಶಾಲೆ ಜನರಲ್ ಶತಮಾನೋತ್ಸವ ಸಂಭ್ರಮ, ನೂತನ ಕಟ್ಟಡ ಉದ್ಘಾಟನೆ


ಕಾಸರಗೋಡು: ಕಾಸರಗೋಡು ಜಿಲ್ಲೆಯ ಇಚ್ಲಂಗೋಡು ಎಎಲ್‌ಪಿ ಶಾಲೆ ಜನರಲ್ ಇದರ ಶತಮಾನೋತ್ಸವ ಸಂಭ್ರಮ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಶನಿವಾರ (ಜ.15) ಜರುಗಿತು.  ಶಾಲೆಯ ಆಡಳಿತ ವರ್ಗದವರು ಸಮಾರಂಭದ ಉದ್ಘಾಟನೆ ಮಾಡಿದರು. ವಾಸುದೇವ ಮಯ್ಯ ಅಧ್ಯಕ್ಷತೆ ವಹಿಸಿದರು.  ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಹಾಗೂ ಹಲವಾರು ಗಣ್ಯರು ಅತಿಥಿಯಾಗಿ ಭಾಗವಹಿದರು.


ಈ ಭವ್ಯ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 8.30 ರಿಂದ ರಾತ್ರಿ 12.30 ರ ತನಕ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮವು ಕಾಸರಗೋಡು ಜಿಲ್ಲೆ, ಮಂಗಳೂರು, ಉಡುಪಿ, ಕುಂದಾಪುರ, ನೆಲ್ಯಾಡಿ ಹೀಗೆ ರಾಜ್ಯ ಹಾಗೂ ಹೊರರಾಜ್ಯದ ನಮ್ಮ ಸಂಸ್ಥೆಯ ಅಪ್ರತಿಮ ಕಲಾರತ್ನಗಳ ಕೂಡುವಿಕೆಯಿಂದ ಹಲವು ತರದ ನೃತ್ಯ ವೈಭವವ ಪ್ರದರ್ಶಿಸುತ್ತಾ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಸಾಹಿತ್ಯ ವಾಚನ ಹಾಗೂ ಸಮಗ್ರ ನಿರೂಪಣೆಯನ್ನು ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ನಿರ್ವಹಿಸಿದರು.


ಈ ಸಂಭ್ರಮದ ಕಾರ್ಯಕ್ರಮದಲ್ಲಿ ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು, ಹೇಮಂತ್ ಬೈಲೂರ್, ಕೆ. ಕೀರ್ತಿ, ವಿಲಾಸ್ ನಾಯಕ್, ಧನ್ಯಶ್ರೀ, ಶಿವಾನಿ, ಸಿರಿ, ಪ್ರಥಮ್ಯ ಯು ವೈ, ನಿರೀಕ್ಷಾ ಶೆಟ್ಟಿ, ಅಕ್ಷತಾ ಅಡಿಗ, ಎಮ್. ಎಸ್. ಶ್ರೀಲತಾ ಹೆಬ್ಬಾರ್, ನಿವೇದಿತಾ, ಭೂಮಿಕಾ ಉಡುಪ, ಸಭ್ಯಾ ಪಂಜಿಗರ್, ಸುನೇತ್ರ ಉಡುಪ, ವಿಶ್ರುತಾ ಹೇರ್ಲೆ, ಸಾನ್ವಿ ಗುರುಪುರ, ಚುಕ್ಕಿ ವಿಟ್ಲ, ತನ್ವಿ ಶೆಟ್ಟಿ, ಸಾಕ್ಷಿ ಗುರುಪುರ, ಅಹನಾ ಎಸ್ ರಾವ್, ಕಾರ್ತಿಕೇಯ ಉಡುಪ, ಗೋಪಾಲಕೃಷ್ಣ ಭಟ್, ಸಾತ್ಯಕಿ ಪಂಜಿಗಾರ್, ಸನುಷಾ ಸುಧಾಕರನ್, ಭವಿಷ್ ವಿಟ್ಲ, ಶಾoಭವೀ ಸತೀಶ್, ಸುಲೋಚನ, ಪುಷ್ಪ ಪ್ರಸಾದ್, ಸುಪ್ರೀತಾ ಶೆಟ್ಟಿ, ಸರಿತಾ. ಕೆ, ಯಶೋದ ಹರೀಶ್ ಶೆಣೈ, ಶ್ರೀಕೃಷ್ಣ ಅಡಿಗ, ವಿಜಿತಾ ಕೇಶವನ್,  ಕೃತಿ ಗುರುಪುರ, ಸಾದ್ವಿನಿ, ನಿತ್ಯ ಗುರುಪುರ, ನಿಧೀಶ್, ನಿಶಾಂತ್ ಗಣೇಶ್ ಶೆಟ್ಟಿಗಾರ್, ವೃದ್ಧಿಕಾ ಮಲರಾಣಿ, ಹರ್ಷಿತ್ ಕುಮಾರ್, ಆರ್ಯ ಗಣೇಶ್ ಶ್ಯಾನುಭೋಗ್, ಶ್ರೇಯಸ್, ಉಷಾ ಸುಧಾಕರನ್, ಮುಂತಾದ ಸಂಸ್ಥೆಯ ಹೆಮ್ಮೆಯ ಕಲಾವಿದರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.


ಸಂಸ್ಥೆಯ ವತಿಯಿಂದ ಸಂಸ್ಥೆಯ ಹೆಮ್ಮೆಯ ಕಲಾವಿದೆಯಾದಂತ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿರುವ ಕುಮಾರಿ ಸಾನ್ವಿ ಗುರುಪುರ ಇವರ ಹುಟ್ಟುಹಬ್ಬದ ಸಂಭ್ರಮವನ್ನು ಎಲ್ಲಾ ಕಲಾವಿದರ, ಗಣ್ಯರ ಹಾಗೂ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಆಚರಿಸಿ ಹರಸಲಾಯಿತು.


ಶಾಲೆಯ ಮುಕ್ಯೋಪಾಧ್ಯಾಯರಾದ ಜಯರಾಮ್ ಸಿ ಎಚ್ ಹಾಗೂ ಅಧ್ಯಾಪಕ ವೃಂದದವರು ಮತ್ತು ಶ್ರೀ ಶಾರದಾಂಬಾ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಅಧ್ಯಕ್ಷರು ಡಾ. ವಾಣಿಶ್ರೀ ಕಾಸರಗೋಡು ಹಾಗೂ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರನ್ನು ಶಾಲು ಹೊದೆಸಿ ಗೌರವ ಸ್ಮರಣಿಕೆ ನೀಡಿ ಸತ್ಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post