ಮಂಗಳೂರು: ಒಂದು ಮಗುವಿನ ದೈಹಿಕ, ಮಾನಸಿಕ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಹಾಗೂ ವ್ಯಕ್ತಿತ್ವದ ಪರಿಪೂರ್ಣ ವಿಕಸನವಾಗಲು ಹಾಲು ಹಲ್ಲು ಅತೀ ಅಗತ್ಯ. ಹಾಲು ಹಲ್ಲು ಮಗುವಿಗೆ ಅಗಿಯಲು, ಜಗಿಯಲು ಸಹಾಯ ಮಾಡುವ ಜೊತೆಗೆ ಮುಖದ ದವಡೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುತ್ತದೆ. ಮಗುವಿನ ಮಾತಿನ ಸ್ಪಷ್ಟತೆ ಮತ್ತು ಶಬ್ದಗಳ ಉಚ್ಚಾರಕ್ಕೆ ಹಾಲು ಹಲ್ಲುಗಳು ಅತ್ಯಗತ್ಯ. ಮಗುವಿನ ದೈಹಿಕ ಆರೋಗ್ಯಕ್ಕೂ ಹಾಲು ಹಲ್ಲುಗಳು ಅನಿವಾರ್ಯ. ಈ ಎಲ್ಲಾ ಕಾರಣಗಳಿಂದ ಹಾಲು ಹಲ್ಲುಗಳನ್ನು ನಿರ್ಲಕ್ಷಿಸಲೇ ಬಾರದು. ಬಾಯಿಯಲ್ಲಿ ಹಾಲು ಹಲ್ಲುಗಳು ಮೂಡಲು ಆರಂಭಿಸಿದ ಕೂಡಲೇ ಹಾಲು ಹಲ್ಲುಗಳ ಆರೈಕೆ ಆರಂಭಿಸಬೇಕು. ನಿರಂತರ 6 ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ, ಸಲಹೆ ಸಂದರ್ಶನ ಮಾಡಬೇಕು. ನೋವು ಬಂದಾಗ ಮಾತ್ರ ದಂತ ವೈದ್ಯರ ಭೇಟಿ ಸಲ್ಲದು. ಹೇಗಾದರೂ ಬಿದ್ದು ಹೋಗುವ ಹಲ್ಲು ಎಂಬ ತಾತ್ಸಾರ ಮಾಡಬಾರದು ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ಮಂಗಳವಾರ (ಜ. 3) ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ನಗರದ ಮೇರಿಹಿಲ್ ನಲ್ಲಿರುವ ಇನ್‍ಫ್ಯಾಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಾಯಿ ಆರೋಗ್ಯ ಮಾಹಿತಿ ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ದಂತ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಿದರು. ಸುಮಾರು 60 ಮಕ್ಕಳಿಗೆ ಈ ಸಂದರ್ಭದಲ್ಲಿ ಉಚಿತವಾಗಿ ಟೂತ್ ಪೇಸ್ಟ್, ಟೂತ್ ಬ್ರಶ್ ಮತ್ತು ದಂತ ಆರೋಗ್ಯದ ಕರಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಇನ್‍ಫ್ಯಾಂಟ್ ಜೀಸಸ್ ಶಾಲೆಯ ಶಿಕ್ಷಕಿಯರಾದ ಸಿಸ್ಟರ್ ಪ್ರಣೀತಾ, ಶ್ರೀಮತಿ ಸ್ಟೆಲ್ಲಾ, ಶ್ರೀಮತಿ ಸುಕಲತಾ, ಪ್ರೀತಿ ಮುಂತಾದವರು ಉಪಸ್ಥಿತರಿದ್ದರು. ಹೊಸ ವರುಷದ 2023 ರ ಸಂಭ್ರಮಾಚರಣೆ ಅಂಗವಾಗಿ ಈ ಬಾಯಿ ಆರೋಗ್ಯ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment