ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಲಯಾಳಂನ ರಂಗಭೂಮಿ ಮತ್ತು ಹಿರಿಯ ಚಲನಚಿತ್ರ ನಟ ಕೊಚ್ಚು ಪ್ರೇಮಂ

ಮಲಯಾಳಂನ ರಂಗಭೂಮಿ ಮತ್ತು ಹಿರಿಯ ಚಲನಚಿತ್ರ ನಟ ಕೊಚ್ಚು ಪ್ರೇಮಂ

 


ಮಲಯಾಳಂನ ರಂಗಭೂಮಿ ಮತ್ತು ಹಿರಿಯ ಚಲನಚಿತ್ರ ನಟ ಕೊಚ್ಚು ಪ್ರೇಮಂ ಅವರು ಶ್ವಾಸಕೋಶದ ಕಾಯಿಲೆಯಿಂದ ಡಿ. 3 ರಂದು ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1955 ರಲ್ಲಿ ತಿರುವನಂತಪುರದಲ್ಲಿ ಜನಿಸಿದ ಕೊಚ್ಚು ಪ್ರೇಮಂ ಅವರು, ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

ಬಳಿಕ ಮಲಯಾಳಂ ರಂಗಭೂಮಿಯ ಪ್ರಮುಖ ಭಾಗವಾಗಿ ಹೊರಹೊಮ್ಮಿದರು. ಮೊಹಮ್ಮದ್ ಮಣಿ ಬರೆದ ಎಝು ನಿರಂಗಲ್ (1979) ಚಿತ್ರದ ಮೂಲಕ ತಮ್ಮ ಸಿನಿಮಾಗೆ ಪದಾರ್ಪಣೆ ಮಾಡಿದರು.

ಇವರು ತಿಲಕ್ಕಂ, ಕಲ್ಯಾಣರಾಮನ್, ತೆಂಕಾಸಿಪಟ್ಟಣಂ, ಮತ್ತು ಪಟ್ಟಾಭಿಷೇಕಂ ಮುಂತಾದ ಚಲನಚಿತ್ರಗಳಲ್ಲಿನ ಹಾಸ್ಯ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದರು.


ಕೊಚ್ಚು ಪ್ರೇಮಂ ಅವರು ಟಿವಿ ಉದ್ಯಮದ ಅವಿಭಾಜ್ಯ ಅಂಗವಾಗಿದ್ದರು. ಸಿನಿಮಾಲಾ, ಕಲಿವೀಡು, ಮಿಸೆಸ್ ಹಿಟ್ಲರ್ ಮತ್ತು ಸ್ವಾಮಿ ಅಯ್ಯಪ್ಪನ್ ಮುಂತಾದ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ.


ಪೃಥ್ವಿರಾಜ್ ಅವರ ಕಡುವ, ಮೋಹನ್ ಲಾಲ್ ಅವರ ಆರಾಟ್ಟು ಮತ್ತು ಮಮ್ಮುಟ್ಟಿ ನಾಯಕತ್ವದ ದಿ ಪ್ರೀಸ್ಟ್ ಅವರು ನಟಿಸಿದ ಇತ್ತೀಚಿನ ಚಿತ್ರಗಳಾಗಿವೆ.


ಕೊಚ್ಚು ಪ್ರೇಮಂ ಪತ್ನಿ ನಟಿ ಗಿರಿಜಾ ಪ್ರೇಮನ್ ಮತ್ತು ಪುತ್ರ ಹರಿಕೃಷ್ಣನ್ ಅವರನ್ನು ಅಗಲಿದ್ದಾರೆ.


0 Comments

Post a Comment

Post a Comment (0)

Previous Post Next Post