ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಭಗವಾನ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಅನಾರೋಗ್ಯದಿಂದಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.
ದೊರೈ-ಭಗವಾನ್ ಅವರು ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೊಸಬೆಳಕು, ಭಾಗ್ಯೋದಯ, ಮಂಗಳಸೂತ್ರ, ರೌಡಿ ರಂಗಣ್ಣ, ವಸಂತ ಗೀತೆ, ಸೂತ್ರಧಾರ, ವಸಂತ ಗೀತೆ, ಹಾಲು ಜೇನು, ಜೀವನ ಚೈತ್ರಾ, ಬೆಂಗಳೂರು ಮೇಲ್ ನಂತಹ ಕೆಲವು ಚಿತ್ರಗಳಲ್ಲಿಯೂ ಭಗವಾನ್ ನಟಿಸಿದ್ದಾರೆ.
ಅವರು ಹೆಚ್ಚಾಗಿ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಮತ್ತು ಜಿ.ಕೆ.ವೆಂಕಟೇಶ್ ಅವರೊಂದಿಗೆ ತಮ್ಮ ಹೆಚ್ಚಿನ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.
ಇಂತಹ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
Post a Comment