ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಸ್ತೆ ಅಗಲೀಕರಣಕ್ಕಾಗಿ ಹುಬ್ಬಳ್ಳಿಯ ದರ್ಗಾ ತೆರವು

ರಸ್ತೆ ಅಗಲೀಕರಣಕ್ಕಾಗಿ ಹುಬ್ಬಳ್ಳಿಯ ದರ್ಗಾ ತೆರವು

 


ಹುಬ್ಬಳ್ಳಿ: ರಸ್ತೆ ಅಗಲೀಕರಣಕ್ಕಾಗಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ತೆರವುಗೊಳಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿ ದರ್ಗಾ ಇತ್ತು. ಆದರೆ ರಸ್ತೆ ಅಗಲೀಕರಣಕ್ಕಾಗಿ ದರ್ಗಾ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು.

ಪೊಲೀಸ್ ಆಯುಕ್ತರ ಬಿಗಿ ಬಂದೋಬಸ್ತ್ ನಲ್ಲಿ ದರ್ಗಾ ತೆರವು ಕಾರ್ಯಾಚರಣೆ ನಡೆದಿದೆ.

ಮುಂಜಾಗೃತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ 500 ಮೀಟರ್ ವರೆಗೆ ರಸ್ತೆ ಬಂದ್ ಮಾಡಲಾಗಿದೆ. ಮುಖ್ಯರಸ್ತೆಗೆ ಬ್ಯಾರಿಕೇಡ್ ಗಳನ್ನು ಅಳವಡಿಸಿ ತೆರವು ಕಾರ್ಯಾಚರಣೆ ನಡೆದಿದೆ.

ಭದ್ರತೆಗಾಗಿ 5 ಡಿವೈ ಎಸ್ ಪಿ, 13 ಪಿಐ, 15 ಪಿ ಎಸ್ ಐ, 250 ಕಾನ್ಸ್ ಟೇಬಲ್ ಹಾಗೂ ಆರ್ ಎ ಎಫ್, ಕೆ ಎಸ್ ಆರ್ ಪಿ, ಸಿ ಎ ಆರ್ ತುಕಡಿ ನಿಯೋಜಿಸಲಾಗಿದೆ.

0 Comments

Post a Comment

Post a Comment (0)

Previous Post Next Post