ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೂರು ಜಿಲ್ಲೆಗಳ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಹ್ವಾನ

ಮೂರು ಜಿಲ್ಲೆಗಳ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಹ್ವಾನ


ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಡಿಸೆಂಬರ್ 18 ಭಾನುವಾರ ಮಂಗಳೂರಿನ ಕೆನರಾ ಸ್ಕೂಲ್ ಉರ್ವ ಇಲ್ಲಿಯ ಮಿಝಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಿರುವ ನೂರೊಂದು ಕವಿಗಳ ಸಮಾಗಮದ ವಿನೂತನ ಸಮ್ಮೇಳನ 'ಕಾವ್ಯ ದಶಾವತಾರ- ಕವಿಕಾವ್ಯಸಮ್ಮಾನ' ಪ್ರಯುಕ್ತ ಅದೇ ದಿನ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.

ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ "ನಮ್ಮ ಮನೆ", 5 ರಿಂದ 7ನೆ ತರಗತಿ ವಿದ್ಯಾರ್ಥಿಗಳಿಗೆ 'ನಮ್ಮ ಪರಿಸರ', 8 ರಿಂದ 10ನೇ ವಿದ್ಯಾರ್ಥಿಗಳು 'ನಮ್ಮೂರ ಹಬ್ಬ' ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 'ಡಿಜಿಟಲ್ ಇಂಡಿಯಾ" ವಿಷಯದಲ್ಲಿ ಚಿತ್ರಗಳನ್ನು ಸ್ಥಳದಲ್ಲೇ ಬಿಡಿಸಬೇಕು. ಸ್ಪರ್ಧೆಯ ಅವಧಿ ಎರಡು ಗಂಟೆಗಳು. ಏ-ತ್ರಿ ಗಾತ್ರದ ಡ್ರಾಯಿಂಗ್ ಶೀಟ್ ಮತ್ತು ಚಿತ್ರ ಬಿಡಿಸಲು ಬೇಕಾಗುವ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ತಲಾ ಮೂರು ಬಹುಮಾನಗಳಿರುತ್ತವೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು 15 ತಾರೀಕಿನೊಳಗೆ ತಮ್ಮ ಹೆಸರುಗಳನ್ನು 9108425813/ 8310388415 ಸಂಖ್ಯೆಗೆ ವಾಟ್ಸಾಪ್ ಮಾಡಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post