ಮಧುಗಿರಿ: ಇಂದು ಜಿಲ್ಲೆಯಾದ್ಯಂತ ಆರಂಭವಾಗಿರುವ ಮೆದಳು ಜ್ವರ ವಿರುದ್ಧದ ಲಸಿಕೆ ಪಡೆದ ಮಧುಗಿರಿ ಪಟ್ಟಣದ 7 ಮಂದಿ ಜನ ವಿದ್ಯಾರ್ಥಿಗಳಲ್ಲಿ ತಲೆ ಸುತ್ತು ,ವಾಂತಿ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಅಸ್ಪತ್ರೆಗೆ ಚಿಕಿತ್ಸೆ ಗಾಗಿ ದಾಖಲಿಸಲಾಗಿದೆ.
ನಗರದ ಎಂಜಿಎಂ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ರಜೆಯಲ್ಲಿರುವ ಕಾರಣ ಇನ್ನು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಮೂರು ಮಕ್ಕಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ.
ನಾನು ಪ್ರಸ್ತುತ ಮಧುಗಿರಿ ತಾಲೂಕು ಕೊಡುಗೇನಹಳ್ಳಿಯಲ್ಲಿ ಇದ್ದು, ಮಧುಗಿರಿ ಅಸ್ಪತ್ರೆಗೆ ತೆರಳಿ ಪ್ರಕರಣವನ್ನು ಕೂಲಂಕಷವಾಗಿ ಅವಲೋಕಿಸುವುದಾಗಿ ಜಿಲ್ಲಾ ಆರ್.ಸಿ.ಹೆಚ್. ಡಾ.ಕೇಶವ್ ರಾಜ್ ಸ್ಪಷ್ಟಪಡಿಸಿದರು.
Post a Comment