ಮಡಿಕೇರಿ : ಕೊಡಗಿನ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.
ಸೋಮವಾರಪೇಟೆ ಪಟ್ಟಣ ಸಮೀಪದ ಮಸಗೋಡು ಗ್ರಾಮದ ಎಂ.ಎಸ್.ಶಿವಣ್ಣ ಅವರ ಪುತ್ರಿ ಶ್ವೇತಾ(28) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಎಂದು ತಿಳಿದು ಬಂದಿದೆ.
ಸಂಬಂಧಿಯೇ ಆಗಿರುವ ಅಭಿಷೇಕ್ ಅವರೊಂದಿಗೆ 11 ತಿಂಗಳ ಹಿಂದೆಯಷ್ಟೇ ಶ್ವೇತಾ ಅವರ ವಿವಾಹವಾಗಿತ್ತು. ಪತಿ ಹಾಗೂ ಪತ್ನಿ ಬೆಂಗಳೂರಿನಲ್ಲಿ ನೆಲೆಸಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಂತ್ಯಕ್ರಿಯೆ ಮಸಗೋಡು ಗ್ರಾಮದಲ್ಲಿ ನಡೆಯಿತು.
Post a Comment