ಬೆಂಗಳೂರು: ಉಪನ್ಯಾಸಕಿ ವೃತ್ತಿಯ ಜೊತೆಗೆ ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಹಣ ಹೂಡಿಕೆ ಮಾಡಿದ್ದು , ಹಣ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಬೆಳಕಿಗೆ ಬಂದಿದೆ.
ಆರತಿ ಕನಾಟೆ ಮೃತ ಉಪನ್ಯಾಸಕಿ. ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಆರತಿ, ಆನ್ ಲೈನ್ ಲ್ಲಿ ಹಣ ಹಾಕಿದ್ದರಂತೆ. ಆದರೆ ಈಗ ಮೋಸ ಹೋಗಿ ಜೀವನದಲ್ಲಿ ಜಿಗುಪ್ಸೆ ಎಂದು ಡೆತ್ ನೋಟ್ ಬರೆದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ಪಪ್ಪಾ, ನಾನು ಏನೂ ತಪ್ಪು ಮಾಡಿಲ್ಲ. ಆನ್ ಲೈನ್ ನಲ್ಲಿ ಹಣ ಹಾಕಿ ಮೋಸ ಹೋದೆ. ಎಲ್ಲರ ಬಳಿ ಹಣ ಪಡೆದುಕೊಂಡಿದ್ದೇನೆ. ಅವರಿಗೆಲ್ಲ ಮುಖತೋರಿಸಲು ಆಗಲ್ಲ. ನನಗೆ ಲೈಫಿನಲ್ಲಿ ಬದುಕಲು ಆಸೆಯಿಲ್ಲ ಎಂದು ಉಪನ್ಯಾಸಕಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Post a Comment