ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಕೇರಳೋತ್ಸವ ನ.14ರಿಂದ 20ರ ತನಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ನ.14ಕ್ಕೆ ಸಂಜೆ 3 ಗಂಟೆಗೆ ಮಲಂಗರೆ ಕ್ರೀಡಾಂಗಣದಲ್ಲಿ ಕೇರಳೋತ್ಸವದ ಪಂಚಾಯತು ಮಟ್ಟದ ಉದ್ಘಾಟನಾ ಕಾರ್ಯಕ್ರಮ ಹಾಗೂ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ.
ನ.15ಕ್ಕೆ ಬೆಳಿಗ್ಗೆ 9.30 ರಿಂದ ಪಳ್ಳಂ ತಮರ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ, ನ.16ಕ್ಕೆ ಸಂಜೆ 5ಗಂಟೆಯಿಂದ ಬಜಕೂಡ್ಲಿನ ಪಂಚಾಯತ್ ಮಿನಿ ಸ್ಟೇಡಿಯಂನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ನ.17ಕ್ಕೆ ಮಧ್ಯಾಹ್ನ 2.30 ಗಂಟೆಗೆ ಬೆದ್ರಂಪಳ್ಳ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ, ನ.18ಕ್ಕೆ ಮಧ್ಯಾಹ್ನ 1.30 ಗಂಟೆಯಿಂದ ಪಂಚಾಯತ್ ಸಭಾಂಗಣದಲ್ಲಿ ವೇದಿಕೆಯೇತರ ಸ್ಪರ್ಧೆಗಳು, ನ.18ಕ್ಕೆ ಮಧ್ಯಾಹ್ನ 4 ಗಂಟೆಯಿಂದ ಪೆರ್ಲ ಶಂಕರ ಸದನದಲ್ಲಿ ಬ್ಯಾಡ್‌ಮಿಂಟನ್ ಹಾಗೂ ಚೆಸ್ ಸ್ಪರ್ಧೆ ನಡೆಯಲಿದೆ. ನ.19ಕ್ಕೆ ಬೆಳಿಗ್ಗೆ 9.30 ಗಂಟೆಯಿಂದ ಕಾಟುಕುಕ್ಕೆ ಶಾಲಾ ಮೈದಾನದಲ್ಲಿ ಆಟೋಟ ಸ್ಪರ್ಧೆ ಹಾಗೂ ಮಧ್ಯಾಹ್ನ 1.30 ಗಂಟೆಯಿಂದ ಪುಟ್ಬಾಲ್ ಸ್ಪರ್ಧೆ ನಡೆಯಲಿದೆ.
ನ.20 ರಂದು ಎಣ್ಮಕಜೆ ಪಂಚಾಯತು ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿವೆ. ಅಂದು ಸಂಜೆ 5 ಗಂಟೆಗೆ ಕೇರಳೋತ್ಸವದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಜರಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment