ಬೆಂಗಳೂರು : ಬಿಎಂಟಿಸಿ( ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಉಪಾಧ್ಯಕ್ಷರಾಗಿ ಕೆ.ವಿ ನವೀನ್ ಕಿರಣ್ ರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಿಕ್ಷಣ ಪ್ರೇಮಿ ಎಂದೇ ಪ್ರಸಿದ್ದಿ ಪಡೆದ ಕೆ.ವಿ ನವೀನ್ ಅವರನ್ನು ಬಿಎಂಟಿಸಿ ( ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಉಪಾಧ್ಯಕ್ಷರಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತಿರುವ ಯುವ ರಾಜಕಾರಣಿ ಕೆ.ವಿ ನವೀನ್ ಸಾಕಷ್ಟು ಜನಮೆಚ್ಚುಗೆಗೆ ಪಾತ್ರರಾಗಿದ್ದರು.
ನವೀನ್ ಗೆ ಬಿಎಂಟಿಸಿ ಉಪಾಧ್ಯಕ್ಷ ಹುದ್ದೆ ಸ್ಥಾನ ನೀಡುತ್ತಿದ್ದಂತೆ ನವೀನ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.
Post a Comment