ಮಂಗಳೂರು: ಕಬೇತಿಗುತ್ತು ಮನೆತನದ ದುಗ್ಗಣ್ಣ ಬೈದರಿಂದ ಮುನ್ನಡೆಸಿಕೊಂಡು ಬರುತ್ತಿರುವ ಸಾವಿರ ವರ್ಷಗಳ ಇತಿಹಾಸವಿರುವ ತುಳುನಾಡಿನ ಬಾರೆ ಹಾಕುವ ಸಂಪ್ರದಾಯದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಪಾಲ್ಗೊಂಡರು.
ಸ್ವತ: ಕೃಷಿಯಲ್ಲಿ ತುಂಬಾ ಆಸಕ್ತಿ ಇರುವ, ಕೃಷಿ ಮನೆತನದ ಡಾ. ಭರತ್ ಶೆಟ್ಟಿಯವರು ಈ ಕುರಿತು ಮಾತನಾಡುತ್ತಾ, ಇಂದಿಗೂ ಈ ಸಂಪ್ರದಾಯವನ್ನು ಉಳಿಸಿ, ಆಚರಿಸಿಕೊಂಡು ಬರುತ್ತಿರುವ ಕುಟುಂಬಸ್ಥರನ್ನು ಅಭಿನಂದಿಸುವುದಾಗಿ ಹೇಳಿದರು. ಇಲ್ಲಿ 5 ಸಲ ಕೋಣಗಳನ್ನು ಕಂಬಳದ ಗದ್ದೆಯಲ್ಲಿ ಓಡಿಸಲಾಗುತ್ತದೆ. ಕಂಬಳದ ಸ್ಪರ್ಧೆ
ಇರುವುದಿಲ್ಲ. ಸುಗ್ಗಿ ಬೆಳೆಯುವ ಮೊದಲು ನಡೆಯುವ ಈ ಕಾರ್ಯಕ್ರಮದಲ್ಲಿ ವರ್ಷಕ್ಕೊಮ್ಮೆ ಭಾಗವಹಿಸುವ ಖುಷಿ ಇದೆ ಶಾಸಕರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಬೇತಿಗುತ್ತು ನ ಪ್ರಮುಖರಾದ ಮೋಹನ್ ಪುಜಾರಿ, ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಅಮಿತಾ ಶೆಟ್ಟಿ, ಹಿರಿಯರು, ನಾಗರಿಕರು, ಸ್ಥಳೀಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಇರುವುದಿಲ್ಲ. ಸುಗ್ಗಿ ಬೆಳೆಯುವ ಮೊದಲು ನಡೆಯುವ ಈ ಕಾರ್ಯಕ್ರಮದಲ್ಲಿ ವರ್ಷಕ್ಕೊಮ್ಮೆ ಭಾಗವಹಿಸುವ ಖುಷಿ ಇದೆ ಶಾಸಕರು ಎಂದು ತಿಳಿಸಿದರು.
Post a Comment