ಕನ್ನಡ ಮತ್ತು ತೆಲುಗು ಸಿನಿಮಾಗಳ ಮೂಲಕ ಜನಪ್ರಿಯ ಗಳಿಸಿದ ನಟಿ ನಿಕ್ಕಿ ಗಲ್ರಾನಿ ಕಳೆದ ಕೆಲ ತಿಂಗಳ ಹಿಂದಷ್ಟೇ ತೆಲುಗು ನಟ ಆದಿ ಪಿನಿಸೆಟ್ಟಿ ಜೊತೆ ಹಸೆಮಣೆ ಏರಿದ್ದಾರೆ.
ಇದೀಗ ನಿಕ್ಕಿ ದಂಪತಿಯ ಬದುಕಲ್ಲಿ ಹೊಸ ಸದಸ್ಯನ ಆಗಮನವಾಗಲಿದೆ ಎನ್ನಲಾಗುತ್ತಿದೆ.
ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ತೆಲುಗು ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದಾರೆ. ಕಳೆದ ಮೇನಲ್ಲಿ ಆದಿ ಪಿನಿಸೆಟ್ಟಿ ಜೊತೆ ಹಸೆಮಣೆ ಏರಿದ್ದ ಈ ಚೆಲುವೆ.
ಸದ್ಯದಲ್ಲಿಯೇ ಈ ಜೋಡಿ ಗುಡ್ ನ್ಯೂಸ್ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ.
ಸಾಕಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ನಿಕ್ಕಿ ಹಾಗೂ ಆದಿ ಬಳಿಕ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ವಿವಾಹದ ಕೆಲವೇ ತಿಂಗಳುಗಳ ನಂತರ ನಿಕ್ಕಿ ಪ್ರೆಗ್ನೆಂಟ್ ಆಗಿದ್ದಾರೆ. ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಫ್ಯಾನ್ಸ್‌ಗೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.
Post a Comment