ಮುಂಬೈ; ಕನ್ನಡದ ಜೋಶ್ ಸಿನಿಮಾದಲ್ಲಿ ನಟಿಸಿದ್ದ ನಟಿ ಪೂರ್ಣಾ ಅಲಿಯಾಸ್ ಶಮ್ನಾ ಖಾಸಿಂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ ಜೊತೆ ಪೂರ್ಣಾ ವಿವಾಹವಾಗಿದ್ದಾರೆ.
ಇತ್ತೀಚೆಗೆ ಪೂರ್ಣಾ ಅವರು ಮದುವೆಯಾಗುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು.
ಆದರೆ ಯಾರ ಜೊತೆ ವಿವಾಹ ಎನ್ನುವ ಮಾತ್ರ ಗುಟ್ಟಾಗಿ ಇಟ್ಟಿದ್ದರು. ಇದೀಗ ಅಕ್ಟೋಬರ್ 24ರಂದು ಪೂರ್ಣಾ ಅವರು ದುಬೈನಲ್ಲಿ ವಿವಾಹವಾಗಿದ್ದಾರೆ.
ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಪಾತ್ರ ಪಾಲ್ಗೊಂಡಿದ್ದರು.
Post a Comment