ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅ.23 ಕ್ಕೆ ಆಡುಮಲ್ಲೇಶ್ವರಕ್ಕೆ ನೂತನ ಸಾರಿಗೆ ವ್ಯವಸ್ಥೆ ಆರಂಭ

ಅ.23 ಕ್ಕೆ ಆಡುಮಲ್ಲೇಶ್ವರಕ್ಕೆ ನೂತನ ಸಾರಿಗೆ ವ್ಯವಸ್ಥೆ ಆರಂಭ

 

ಚಿತ್ರದುರ್ಗ : ಚಿತ್ರದುರ್ಗದ ಮದಕರಿ ಸರ್ಕಲ್‍ನಿಂದ ಆಡುಮಲ್ಲೇಶ್ವರಕ್ಕೆ ನೂತನ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದೇ ಅಕ್ಟೋಬರ್ 23ರಂದು ಭಾನುವಾರ ಬೆಳಿಗ್ಗೆ 10ಕ್ಕೆ ನಗರದ ಮದಕರಿ ಸರ್ಕಲ್‍ನಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನೂತನ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.


ಮದಕರಿ ಸರ್ಕಲ್ ಟು ಆಡುಮಲ್ಲೇಶ್ವರ ನೂತನ ಸಾರಿಗೆ ಮಾರ್ಗವನ್ನು ಸಾರ್ವಜನಿಕ ಪ್ರಯಾಣಿಕರ ಹಿತ ದೃಷ್ಠಿಯಿಂದ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಬೆಳಿಗ್ಗೆ 8ಕ್ಕೆ, ಮಧ್ಯಾಹ್ನ 1ಕ್ಕೆ ಹಾಗೂ ಸಂಜೆ 5ಕ್ಕೆ ಮದಕರಿ ಸರ್ಕಲ್‍ನಿಂದ ಆಡುಮಲ್ಲೇಶ್ವರಕ್ಕೆ ನೂತನ ಸಾರಿಗೆ ಕಾರ್ಯಚರಣೆ ನಡೆಸಲಿದೆ.


ಕಾರ್ಯಕ್ರಮದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಿ.ಮಂಜುನಾಥ್, ಘಟಕ ವ್ಯವಸ್ಥಾಪಕ ಎಂ.ಹೊನ್ನಪ್ಪ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

0 Comments

Post a Comment

Post a Comment (0)

Previous Post Next Post