ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು; ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಯುವಕನ ಅಂಗಾಂಗ ದಾನ

ಮಂಗಳೂರು; ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಯುವಕನ ಅಂಗಾಂಗ ದಾನ

 


ಮಂಗಳೂರು:ದ್ವಿಚಕ್ರ ವಾಹನವೊಂದು ಸ್ಕಿಡ್ ಆದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದು ಕುಟುಂಬಸ್ಥರು ಅಂಗಾಂಗ‌ ದಾನದ ಮೂಲಕ‌ ಸಾರ್ಥಕತೆ ಮೆರೆದಿದ್ದಾರೆ.


ಮೂಡುಶೆ‌ಡ್ಡೆಯ ಗೌರವ್‌ (23) ಚಲಾಯಿಸುತ್ತಿದ್ದ ದ್ಚಿಚಕ್ರ ಬೈಕ್ ಮೂಡುಶೆಡ್ಡೆಯಲ್ಲಿ ಸ್ಕಿಡ್ ಆಗಿ ಬಿದ್ದು ಅವರು ಗಂಭೀರ ಗಾಯಗೊಂಡಿದ್ದರು.


ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಅಪಘಾತದಲ್ಲಿ ತೀವ್ರ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ ಗೌರವ್ ಅಂಗಾಗಗಳನ್ನು ಮನೆಯವರ ಇಚ್ಛೆಯಂತೆ ದಾನ ಮಾಡಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು.


ಲಿವರನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ.

ಒಂದು ಕಿಡ್ನಿಯನ್ನು ಎಜೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅಳವಡಿಸಲಾಗಿದೆ. ಉಳಿದಂತೆ ಒಂದು ಕಿಡ್ನಿ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ಮತ್ತು 2 ಕಣ್ಣಿನ ಕಾರ್ನಿಯಾವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.


0 Comments

Post a Comment

Post a Comment (0)

Previous Post Next Post