ಬೆಂಗಳೂರು : ನಂದಿನಿ ಹಾಲಿನ ಪ್ಯಾಕೇಟ್‍ಗಳ ಮೇಲೆ ಗಂಧದ ಗುಡಿ ಟೈಟಲ್‍ಅನ್ನು ಮುದ್ರಿಸುವ ಮೂಲಕ ಕೆಎಂಎಫ್ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ.
ಅಪ್ಪು ಅವರ ಪುಣ್ಯ ಸ್ಮರಣೆ ಮತ್ತು ನವೆಂಬರ್ 1ರಂದು ರಾಜ್ಯ ಸರ್ಕಾರ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವ ಹಿನ್ನೆಲೆ ಹಾಗೂ ನಂದಿನಿ ಹಾಲಿನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸಲು ಹಾಲಿನ ಪ್ಯಾಕೇಟ್‍ಗಳ ಮೇಲೆ ಗಂಧದ ಗುಡಿ ಟೈಟಲ್‍ಅನ್ನು ಇಂದಿನಿಂದ ನವೆಂಬರ್ 15ರ ವರೆಗೂ ಮುದ್ರಿಸಲಿದೆ.
ಈ ನಡುವೆ ಗಂಧದ ಗುಡಿ ಚಿತ್ರ ತೆರೆಗೆ ಬಂದಿದ್ದು, ಗಂಧದಗುಡಿ ಜರ್ನಿ ಆಫ್ ಎ ಟ್ರೂ ಹೀರೋ ಸಿನಿಮಾ ಟೈಟಲ್ ಮುದ್ರಿಸುವ ಮೂಲಕ ಅಭಿಮಾನದ ಗೌರವ ಸಲ್ಲಿಸುತ್ತಿದೆ. ಅಪ್ಪು ಅವರು ನಂದಿನಿ ಹಾಲಿನ ಅಂಬಾಸಿಡರ್ ಆಗಿ ಅನ್ನದಾತರ ಸಹಾಯಕ್ಕೆ ಕೈ ಜೋಡಿಸಿದ್ದರು
Post a Comment