ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಲ್ಪೆ ; ಮನೆಯವರು ಕಾಯಿಲೆಗೆ ತುತ್ತಾಗಿದ್ದಾರೆಂದು ನಂಬಿಸಿ ಹಣ ವಂಚನೆ

ಮಲ್ಪೆ ; ಮನೆಯವರು ಕಾಯಿಲೆಗೆ ತುತ್ತಾಗಿದ್ದಾರೆಂದು ನಂಬಿಸಿ ಹಣ ವಂಚನೆ

 


ಮಲ್ಪೆ: ತಮ್ಮ ಮನೆಯವರು ಕಾಯಿಲೆಗೆ ತುತ್ತಾಗಿದ್ದಾರೆ. ಚಿಕಿತ್ಸೆಗೆ ಹಣ ಇಲ್ಲ, ಹಣ ಸಂಗ್ರಹಿಸಿ ಕೊಡುತ್ತೇನೆಂದು ಬೆಂಗಳೂರಿನಿಂದ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದ ವ್ಯಕ್ತಿ ಈಗ ನಾಪತ್ತೆಯಾಗಿದ್ದಾನೆ.

ಹೀಗೆ ಮಾತಿನಲ್ಲೇ ಮರಳು ಮಾಡುವ ತಂಡವೊಂದು ಹಲವರನ್ನು ನಂಬಿಸಿ ಹಣ ಪೀಕಿಸಿ ವಂಚಿಸಿದ ಘಟನೆ ಮಲ್ಪೆ ಬಂದರು ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಮಗುವಿನ ಜೊತೆಯಲ್ಲಿ ಗಂಡ-ಹೆಂಡತಿ ಎಂದು ಹೇಳಿಕೊಂಡು ಮಲ್ಪೆಗೆ ಬಂದಿದ್ದ ಈ ತಂಡದವರು ಆಂಧ್ರಪ್ರದೇಶದವರು ಎಂದು ಹೇಳಲಾಗುತ್ತಿದೆ.

ಬಂದರಿನಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಭೇಟಿಯಾಗಿ ಅವರಲ್ಲಿ ತಮ್ಮ ವಿಚಾರವನ್ನು ಹೇಳಿಕೊಂಡಿದ್ದರು. ನಮಗೆ ಬಂಧು-ಬಳಗ ಯಾರೂ ಇಲ್ಲ, ತಾಯಿ ಆಸ್ಪತ್ರೆಯಲ್ಲಿದ್ದಾರೆ. ತಮ್ಮ ಕೈಲಾದ ನೆರವನ್ನು ನೀಡಿ ಸಹಕರಿಸುವಂತೆ ವಿನಂತಿಸಿದ್ದರು.

ಅವರು ಸುಮಾರು 2 ಸಾವಿರ ರೂಪಾಯಿ ಸಂಗ್ರಹಿಸಿ ಅವರಿಗೆ ನೀಡಿ ರೈಲು ನಿಲ್ದಾಣಕ್ಕೆ ಕಳುಹಿಸಿ ಕೊಟ್ಟಿದ್ದರು. ಮಲ್ಪೆ ಬಂದರಿನಲ್ಲಿ ನಾನಾ ಕಥೆ ಕಟ್ಟಿದ ಈ ತಂಡ ಬೇರೆ ಬೇರೆ ಜನರಿಂದ ಸಾವಿರಾರು ರೂ. ಪಡೆದುಕೊಂಡಿದೆ ಎನ್ನಲಾಗುತ್ತಿದೆ.


ಮಹಿಳೆ, ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಂದು ಜನರನ್ನು ಯಾಮಾರಿಸಿ ದುಡ್ಡು ಪಡೆಯುವ ತಂಡ ಕರಾವಳಿಯಲ್ಲಿ ಮತ್ತೆ ಸಕ್ರಿಯವಾಗುತ್ತಿದೆ.

0 Comments

Post a Comment

Post a Comment (0)

Previous Post Next Post