ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ, ಹೆತ್ತವರಿಗಾಗಿ ಮಾದಕವಸ್ತು ವಿರೋಧಿ ತಿಳುವಳಿಕಾ ಶಿಬಿರವನ್ನು ನಡೆಸಲಾಯಿತು. ಬೆಳಗ್ಗೆ 10 ಗಂಟೆಗೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಮಾದಕವಸ್ತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ನೇರ ದೃಶ್ಯಪ್ರಸಾರವನ್ನು ಪ್ರದರ್ಶಿಸಲಾಯಿತು.
ಶಾಲಾ ಮಟ್ಟದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಹಾಜರಿದ್ದು, ಹೆತ್ತವರು ಮಕ್ಕಳ ಮೇಲೆ ಇರಿಸಬೇಕಾದ ಕಾಳಜಿಯನ್ನು ನೆನಪಿಸಿದರು. ಮುಖ್ಯೋಪಾಧ್ಯಾಯ ಇ.ಎಚ್ ಗೋವಿಂದ ಭಟ್ ಮಾತನಾಡಿ "ಮಕ್ಕಳು ಮಾದಕವಸ್ತು ಗಳ ದಾಸರಾಗದಂತೆ ಹೆತ್ತವರು ಮಕ್ಕಳ ಚಲನವಲನಗಳನ್ನು ಸಮೀಪದಿಂದ ಗಮನಿಸುತ್ತಿರಬೇಕು" ಎಂದು ಎಚ್ಚರಿಸಿದರು.
ಅಧ್ಯಾಪಕ "ರಕ್ಷಿತ್ ಕುಮಾರ್" ಇವರು ಮಾದಕ ವಸ್ತುಗಳ ಕುರಿತಾದ ತಿಳುವಳಿಕೆಯನ್ನು, ಹೆತ್ತವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ವಿವರಿಸಿದರು. ಈ ಸಂದರ್ಭ ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ , ಅಧ್ಯಾಪಿಕೆ ಉಷಾ .ಕೆ.ಆರ್ ಹಾಗೂ ಆಧ್ಯಾಪಕ ರಾಜಕುಮಾರ್ ಉಪಸ್ಥಿತರಿದ್ದರು. ಹೆತ್ತವರ ಪ್ರತಿನಿಧಿಯಾಗಿ ಕೃಷ್ಣ ಭಟ್ ಹಾಗೂ ಚಂದ್ರಕಲಾ ಇವರ ಗೌರವ ಉಪಸ್ಥಿತಿಯಿತ್ತು. ಶಿವಪ್ರಸಾದ್ ಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಶಿಧರ ಕೆ ವಂದಿಸಿದರು. ಎಲ್ಲಾ ಅಧ್ಯಾಪಕ, ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment