ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೈದ್ಯಕೀಯ ಕ್ಷೇತ್ರ: ಕೆಂಪಮ್ಮ ಪ್ರಶಸ್ತಿಗೆ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆ

ವೈದ್ಯಕೀಯ ಕ್ಷೇತ್ರ: ಕೆಂಪಮ್ಮ ಪ್ರಶಸ್ತಿಗೆ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆ


ಕಾಸರಗೋಡು: ಮೈಸೂರಿನ ಜಾಗೃತಿ ಸಂಸ್ಥೆ ನೀಡುವ ಕೆಂಪಮ್ಮ ಪ್ರಶಸ್ತಿಗೆ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸಂಸ್ಥಾಪಕಾಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಅವರು ಆಯ್ಕೆಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿದ್ದುಕೊಂಡು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರ ವಿಭಾಗದಲ್ಲಿ ಈ ಪ್ರಶಸ್ತಿ ಈ ಬಾರಿ ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ಸಲ್ಲುತ್ತಿದೆ.


ಸುದೀರ್ಘ 18 ವರ್ಷಗಳ ವೈದ್ಯಕೀಯ ಸೇವೆ ನಡೆಸುತ್ತಿದ್ದಾರೆ. ಕಾಸರಗೋಡಿನ ಚೂರಿಪ್ಪಳ್ಳ ಎಂಬಲ್ಲಿ ಸ್ವಂತ ಆಯುರ್ವೇದ ಆಸ್ಪತ್ರೆ ನಿರ್ಮಿಸಿ ದಿನದ 24 ಘಂಟೆಯೂ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ, ದೂರವಾಣಿ ಮುಖಾಂತರ ಅರೋಗ್ಯ ಸಲಹೆ ಹಾಗೂ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ.


ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲೂ ಹಲವು ಸಂಘಟನೆಗಳೊಂದಿಗೆ ಸಕ್ರಿಯವಾಗಿ ಭಾಗಿಯಾಗಿರುವ ಡಾ. ವಾಣಿಶ್ರೀ ಕಾಸರಗೋಡು, ಪ್ರಕೃತಿ ಎಂಬ ಕೃತಿ ಲೋಕಾರ್ಪಣೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.  ಹಲವಾರು ಕವಿಗೋಷ್ಠಿಯಲ್ಲಿ ಅಧ್ಯಕ್ಷರಾಗಿ ಅತಿಥಿಯಾಗಿ ಕವಯತ್ರಿಯಾಗಿ ಭಾಗವಹಿಸಿದ್ದಾರೆ.

ಹಲವಾರು ಪ್ರಬಂಧ ಲೇಖನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತುಳು ಹವ್ಯಕ ಇಂಗ್ಲಿಷ್ ಸಂಸ್ಕೃತ ಮಲಯಾಳ ಹೀಗೆ ಬಹುಭಾಷೆಗಳಲ್ಲಿ ಕವನ ರಚನೆಯನ್ನೂ ಮಾಡಿದ್ದಾರೆ. ಹಲವಾರು ಆರೋಗ್ಯಕ್ಕೆ ಸಂಬoಧ ಪಟ್ಟ ಲೇಖನ ಹಾಗೂ ಕವನ ಪ್ರಕಟಿಸಿದ್ದಾರೆ.



0 Comments

Post a Comment

Post a Comment (0)

Previous Post Next Post