ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಣ್ಣು ಮಗು ಹುಟ್ಟಿದ ಸಂತಸ ಹಂಚಿಕೊಂಡ ಧ್ರುವ ಸರ್ಜಾ

ಹೆಣ್ಣು ಮಗು ಹುಟ್ಟಿದ ಸಂತಸ ಹಂಚಿಕೊಂಡ ಧ್ರುವ ಸರ್ಜಾ

 


ಬೆಂಗಳೂರು: ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ನಟ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಅವರು ಭಾನುವಾರ (ಅ.2) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.


ನಿನ್ನೆ (ಅ.1) ಸಂಜೆಯೇ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಬನಶಂಖರಿಯ ಕೆ.ಆರ್.


ರಸ್ತೆಯಲ್ಲಿರುವ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಪತಿ ಧ್ರುವ ಸರ್ಜಾ ಕೂಡ ನಿನ್ನೆಯಿಂದಲೂ ಆಸ್ಪತ್ರೆಯಲ್ಲಿಯೇ ಇದ್ದರು. ಇದೀಗ ಹೆಣ್ಣು ಮಗು ಜನಿಸಿರುವ ಬಗ್ಗೆ ಧ್ರುವ ಸರ್ಜಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 


ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಸುಂದರವಾದ ಹೆಣ್ಣು ಮಗುವಿನೊಂದಿಗೆ ಆಶೀರ್ವಾದ ಪಡೆದಿದ್ದೇವೆ.


 ಪ್ರೇರಣಾಗೆ ನಾರ್ಮಲ್ ಡೆಲಿವರಿ ಆಗಿದೆ. ವೈದ್ಯರಿಗೆ ಧನ್ಯವಾದಗಳು ಎಂದು ಧ್ರುವ ಸರ್ಜಾ ಅವರು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.


0 Comments

Post a Comment

Post a Comment (0)

Previous Post Next Post