ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಹಿತಿ ಭೀಮರಾವ್ ವಾಷ್ಠರ್ ರವರು ಹಾಡಿದ ನಾಗರಹಾಳ ದಾವಲ್ ಮಲಿಕ್ ದೇವಾ ಭಕ್ತಿಗೀತೆ ಬಿಡುಗಡೆ

ಸಾಹಿತಿ ಭೀಮರಾವ್ ವಾಷ್ಠರ್ ರವರು ಹಾಡಿದ ನಾಗರಹಾಳ ದಾವಲ್ ಮಲಿಕ್ ದೇವಾ ಭಕ್ತಿಗೀತೆ ಬಿಡುಗಡೆ


ಸುಳ್ಯ: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ನಾಗರಹಾಳದ ಹಜರತ್ ದಾವಲಮಲಿಕ್ ದೇವರ ಉರುಸ್ ಜಾತ್ರೆಯ ಸಂದರ್ಭದಲ್ಲಿ ಸುಳ್ಯದ ಸಾಹಿತಿ, ಚಿತ್ರ ನಿರ್ದೇಶಕ ಮತ್ತು ಜ್ಯೋತಿಷಿ ಹಾಗೂ ಗಾಯಕರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ, ಹಾಡಿರುವ ನಾಗರಹಾಳ ದಾವಲ್ ಮಲಿಕ್ ದೇವಾ ಎಂಬ ಭಕ್ತಿಗೀತೆಯನ್ನು ಹಜರತ್ ದಾವಲ್ ಮಲಿಕ್ ಅವರ ಭವ್ಯ ದರ್ಗಾದ ಮುಂದೆ ಸಂತ ಶಿಶುನಾಳ ಷರೀಫ್ ಅಜ್ಜನವರ ವಂಶಸ್ಥರಾದ ಜನಾಬ್ ಹುಸೇನ್ ಸಾಬ್ ಶರೀಫನವರ್ ಅವರು ಬಿಡುಗಡೆ ಮಾಡಿದರು.


ಈ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಸಾಹಿತಿ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ,  ರಾಜಕೀಯ ಮುಖಂಡರಾದ ಶ್ರೀ ಹೊನ್ನಪ್ಪ ಮೇಟಿ ನಾಗರಹಾಳ, ಚಂದ್ರಶೇಖರಯ್ಯ ಗದ್ಗೀಮಠ ನಾಗರಹಾಳ, ರಾಜಕೀಯ ಮುಖಂಡ ಶ್ರೀ ಸಂಗಣ್ಣ ಭಾವಿಮನಿ ಆನೆಹೊಸೂರ್, ನಿರುಪಾದಿ ಕವಿಗಳು, ಸುಕ್ಷೇತ್ರ ಸ್ಥಳದಾನಿ ಬಾಲನಗೌಡ, ಶಿಕ್ಷಕ ಶ್ರೀ ನಿಜಲಿಂಗಯ್ಯ ಹಾಲದೇವರಮಠ, ಆಧುನಿಕ ಪ್ರೇಮಕವಿ ವಿಜಯದಾಸ್ ನವಲಿ, ಹುಲ್ಲಪ್ಪ ವಾಲೀಕಾರ್, ದೇವರಾಜ್ ಚೌಡೇಕೇರ್, ಹನುಮಂತ್ ವಾಲೀಕಾರ್ ತೊಂಡಿಹಾಳ್, ಶಂಕರ್ ಭೋವಿ ಬನ್ನಿಗೋಳ್, ಯಂಕೋಬ ಬನ್ನಿಗೋಳ, ಬಸು ಬನ್ನಿಗೋಳ, ಸಲೀಂ ನಾಗರಹಾಳ ಇನ್ನಿತರರು ಉಪಸ್ಥಿತರಿದ್ದರು. ಈ ಮುಂಚೆ 10 ವರ್ಷಗಳ ಹಿಂದೆ ಭೀಮರಾವ್ ವಾಷ್ಠರ್ ರವರು ದಾವಲಮಲಿಕ್ ಮುತ್ಯಾನ ಕುರಿತ 14 ಹಾಡುಗಳಿಗೆ ಸಾಹಿತ್ಯ ಬರೆದು ಬಿಡುಗಡೆ ಮಾಡಿದ್ದರು. 15ನೇ ಭಕ್ತಿಗೀತೆಯನ್ನು ಸುಕ್ಷೇತ್ರದಲ್ಲಿಯೇ ಭಕ್ತರ ಸಮಕ್ಷಮದಲ್ಲಿಯೇ ಬಿಡುಗಡೆ ಮಾಡಲಾಯಿತು.



0 Comments

Post a Comment

Post a Comment (0)

Previous Post Next Post