ಬೆಂಗಳೂರು: ಸಿಟಿಯಲ್ಲಿನ ವಿವಿಧ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟವನ್ನು ಬೆಂಗಳೂರು ಪೊಲೀಸರು ನಿಷೇಧಿಸಿದ್ದಾರೆ.
ದಸರಾ ಆಚರಣೆಯ ಹಿನ್ನೆಲೆ ಈ ನಿಷೇಧವನ್ನು ವಿಧಿಸಲಾಗಿದೆ. ಅಕ್ಟೋಬರ್ 5 ರ ಬುಧವಾರ ಬೆಳಿಗ್ಗೆ 7.00 ಗಂಟೆಯಿಂದ ಅಕ್ಟೋಬರ್ 6ರ ಗುರುವಾರ ಮಧ್ಯಾಹ್ನ 12.00 ಗಂಟೆಯವರೆಗೆ ಉತ್ತರ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
Post a Comment