ಬೆಳ್ತಂಗಡಿ: ಜಾಂಡೀಸ್ ನಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆಯೊಂದು ಪಡ್ಡಂದಡ್ಕ ಕಜೆಮನೆ ಎಂಬಲ್ಲಿ ನಡೆದಿದೆ. ಕಿಶೋರ್ ಆಚಾರ್ಯ (22) ಮೃತ ದುರ್ದೈವಿ.
ಕೃಷ್ಣಯ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರ ಕಿಶೋರ್ ಆಚಾರ್ಯ ಅವರಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.
ಆದರೆ ಅ. 26ರಂದು ಜ್ವರ ಮತ್ತೆ ಉಲ್ಬಣಗೊಂಡ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಾಂಡೀಸ್ ಎಂದು ಖಚಿತಪಡಿಸಿದ್ದರು ಎನ್ನಲಾಗಿದೆ.
ಇದರಿಂದ ಅಂಗಾಂಗ ವೈಫಲ್ಯಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕಿಶೋರ್ ವೇಣೂರು ಪಾರ್ಶ್ವನಾಥ ಪ್ರಿಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ, ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ
Post a Comment