ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೈಲು ಬೋಗಿಯಲ್ಲಿ ನಮಾಝ್ ಮಾಡಿದ ಪ್ರಕರಣ; ಬಿಜೆಪಿ ಮಾಜಿ ಶಾಸಕ ದೂರು, ವಿಡಿಯೋ ಭಾರೀ ವೈರಲ್

ರೈಲು ಬೋಗಿಯಲ್ಲಿ ನಮಾಝ್ ಮಾಡಿದ ಪ್ರಕರಣ; ಬಿಜೆಪಿ ಮಾಜಿ ಶಾಸಕ ದೂರು, ವಿಡಿಯೋ ಭಾರೀ ವೈರಲ್

 


ಲಕ್ನೋ : ರೈಲು ಬೋಗಿಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮಾಜಿ ಶಾಸಕ ದೂರು ದಾಖಲಿಸಿದ್ದಾರೆ. ಘಟನೆ ಅಕ್ಟೋಬರ 20ರಂದು ನಡೆದಿದೆ ಎಂದು ಹೇಳಲಾಗಿದೆ.


ಸತ್ಯಾಗ್ರಹ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಶಾಸಕ ದೀಪಲಾಲ್ ಭಾರತಿ ವಿಡಿಯೋ ಚಿತ್ರಿಕರಿಸಿದ್ದಾರೆ.

ಈ ವಿಡಿಯೋ ಭಾರೀ ವೈರಲ್ ಆಗಿದೆ. ದೀಪಲಾಲ್ ನೀಡಿರುವ ಹೇಳಿಕೆಯ ಪ್ರಕಾರ ಖಡ್ಡ ರೈಲ್ವೇ ನಿಲ್ದಾಣದಲ್ಲಿ ರೈಲು ನಿಂತಾಗ ನಾಲ್ವರು ಬೋಗಿಯ ನಡುವಿನ ಸ್ಥಳದಲ್ಲಿ ನಮಾಝ್ ಮಾಡುತ್ತಿದ್ದರು.


ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಕೆಲವರು ಕುಳಿತಲ್ಲಿಯೇ ದಿಗ್ಭಂದನಕ್ಕೆ ಒಳಗಾಗಿದ್ದು, ಹೊರ ಹೋಗುವ, ಒಳ ಬರುವ ಪ್ರಯಾಣಿಕರಿಗೆ ಅಡಚಣೆಯಾಗಿತ್ತು ಎಂದಿದ್ದಾರೆ.


ಅವರು ಪ್ರಯಾಣಿಕರ ಸಂಚಾರವನ್ನು ನಿರ್ಬಂಧಿಸಿ ನಮಾಝ್ ಮಾಡಲು ಅನುಮತಿ ನೀಡಿದವರು ಯಾರು. ನಾನು ನಮಾಝ್ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದೇನೆ. ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ದೂರನ್ನು ದಾಖಲಿಸಿದ್ದೇನೆ ಎಂದು ದೀಪಲಾಲ್ ತಿಳಿಸಿದ್ದಾರೆ.


ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿರುವ ಬಗ್ಗೆ ಭಾರೀ ಆಕ್ಷೇಪಗಳು ವ್ಯಕ್ತವಾಗಿವೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಲುಲೂ ಮಾಲ್‍ನಲ್ಲಿ ನಮಾಝ್ ಮಾಡಿದ ವಿಡೀಯೋ ಭಾರೀ ವೈರಲ್ ಆಗಿತ್ತು.


0 Comments

Post a Comment

Post a Comment (0)

Previous Post Next Post