ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯವರು ಇಂದಿನಿಂದ ಎರಡು ದಿನ ಗುಜರಾತ್‌ಗೆ ಭೇಟಿ ನೀಡಲಿದ್ದು, ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಸೂರತ್,ಭಾವನಗರ, ಅಹಮದಾಬಾದ್ ಮತ್ತು ಅಂಬಾಜಿಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.
ಅಂದಾಜು 29,೦೦೦ ಕೋಟಿ ರೂಗಳ ಯೋಜನೆ ಇದಾಗಿದೆ. ಬೆಳಗ್ಗೆ 11 ಗಂಟೆಗೆ ಸೂರತ್‌ನಲ್ಲಿ ಡಾ.ಹೆಡೆವಾರ್ ಸೇತುವೆಯಿಂದ ಭೀಮರಾಡ್-ಬಮ್ರೋಲಿ ಸೇತುವೆವರೆಗೆ 82 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಜೀವವೈವಿಧ್ಯ ಉದ್ಯಾನವನದ ಶಂಕುಸ್ಥಾಪನೆ, ವಿಜ್ಞಾನ ಕೇಂದ್ರದಲ್ಲಿ ಝೋಜ್ ಮ್ಯೂಸಿಯಂ ಉದ್ಘಾಟನೆ,
ಭಾವನಗರದಲ್ಲಿ ವಿಶ್ವದ ಮೊದಲ ಸಂಕುಚಿತ ನೈಸರ್ಗಿಕ ಅನಿಲ ಟರ್ಮಿನಲ್ ಮತ್ತು ಬ್ರೌನ್‌ಫೀಲ್ಡ್ ಬಂದರಿನ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ.
ಸಂಜೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟನೆ ಮಾಡಲಿದ್ದಾರೆ.
Post a Comment