ಮಂಗಳೂರು: ಕಾವೂರು-ಕೂಳೂರು ರಸ್ತೆಯ ಪಂಜಿಮೊಗರುನಲ್ಲಿರುವ ಶ್ರೀ ಹೈಟ್ಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಭಾರತೀಯ ಸೇನೆಯ ನಿವೃತ್ತ ಮೇಜರ್ ಡಾ.ರಾಜೇಶ್ ಚಂದ್ರ ಅವರ ಶ್ರೀ ರಾಜರಾಜೇಶ್ವರಿ ಚಿಕಿತ್ಸಾಲಯ ಭಾನುವಾರ ಶುಭಾರಂಭಗೊಂಡಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಚಿಕಿತ್ಸಾಲಯ ಉದ್ಘಾಟಿಸಿದರು. ಜೀವನ ಶೈಲಿಯ ಬದಲಾವಣೆಯಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಆದಾಯದ ಬಹು ದೊಡ್ಡ ಭಾಗ ಆರೋಗ್ಯಕ್ಕಾಗಿ ಮೀಸಲಿಡುವ ಸನ್ನಿವೇಶ ಎದುರಾಗಿದೆ. ಆರೋಗ್ಯ ಸಮಸ್ಯೆಗೆ ಒಳಗಾದವರಿಗೆ ಡಾ.ರಾಜೇಶ್ ಚಂದ್ರ ಅವರ ಚಿಕಿತ್ಸೆಯಿಂದ ಶೀಘ್ರ ಪರಿಹಾರ ದೊರಕಿ, ಉತ್ತಮ ಹೆಸರು ಪಡೆಯುವಂತಾಗಲಿ ಎಂದು ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಮುಖ್ಯ ಅತಿಥಿಯಾಗಿದ್ದರು. ವೈದ್ಯರು ಶಿಕ್ಷಕರಾದಾಗ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಡಾ.ರಾಜೇಶ್ ಚಂದ್ರ ಅವರಿಗೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡಿದ ಅನುಭವ ಇದೆ. ಆದ್ದರಿಂದ ಅವರು ಖಂಡಿತಾ ಯಶಸ್ಸು ಗಳಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಕಟ್ಟಡದ ಮಾಲೀಕ ಗಿರೀಶ್, ಕಟ್ಟಡದ ಕೋಶಾಧಿಕಾರಿ ಸನತ್ ಮಲ್ಲಿ, ವೈದ್ಯೆ ಡಾ.ಶ್ರೀವಿದ್ಯಾ ಉಪಸ್ಥಿತರಿದ್ದರು. ವೈದ್ಯ ಡಾ.ರಾಜೇಶ್ ಚಂದ್ರ ಸ್ವಾಗತಿಸಿದರು. ಮೀರಾದೇವಿ ರಾಜೇಶ್ ಚಂದ್ರ ವಂದಿಸಿದರು. ಉಮೇಶ್ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment