ಸುಳ್ಯ: ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಪ್ರೊಡಕ್ಷನ್ ನಂಬರ್ 2 ಆಯೋಜಿಸುವ ಕೌಟುಂಬಿಕ ಚಲನಚಿತ್ರದ ಚಿತ್ರೀಕರಣಕ್ಕೆ ಉದಯೋನ್ಮುಖ ಕಲಾವಿದರ ಹುಡುಕಾಟದ ಆಡಿಷನ್ ಕಾರ್ಯಕ್ರಮವು ಸುಳ್ಯದ ಶಿವಕೃಪಾ ಕಲಾಮಂದಿರದ ಸಭಾಂಗಣದಲ್ಲಿ ಜರುಗಿತು.
ಈ ಚಲನಚಿತ್ರದ ಸ್ಕ್ರೀನ್ ಪ್ಲೆ ಮತ್ತು ನಿರ್ದೇಶನವನ್ನು ಸುಳ್ಯದ ಖ್ಯಾತ ನಿರ್ದೇಶಕ ಸಂತೋಷ್ ಕೊಡಂಕೇರಿಯವರು ಆಡಿಷನ್ ಗೆ ಬಂದ ನೂತನ ಕಲಾವಿದರಿಗೆ ಸಿನೆಮಾದ ಪಾತ್ರ ಪೋಷಣೆ ಹೇಗೆ....? ಪಾತ್ರಕ್ಕೆ ಜೀವ ಕೊಡುವ ಬಗೆ ಹೇಗೆ ...?? ಚಿತ್ರದಲ್ಲಿ ಅನುಸರಿಸುವ ನೀತಿ ನಿಯಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಆಡಿಷನ್ ನಿರ್ವಹಣೆ ಮಾಡಿದ ಸುಳ್ಯದ ನಟ, ನಿರ್ದೇಶಕ ಮತ್ತು ಜ್ಯೋತಿಷ್ಯರಾದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವೇದಿಕೆಯಲ್ಲಿ ಶಿವಕೃಪಾ ಕಲಾಮಂದಿರದ ಸಂಚಾಲಕರಾದ ವೆಂಕಟೇಶ್ ರವರು ಮತ್ತು ಚಲನಚಿತ್ರ ಸಹ ನಿರ್ದೇಶಕರಾದ ಪ್ರಸನ್ನ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಚಿತ್ರದ ಕಥೆಯನ್ನು ಬರೆದ ಪಾವನಾ ಸಂತೋಷ್, ಛಾಯಾಗ್ರಾಹ ಮುರುಳೀಧರ್ ಮತ್ತು ಚಿತ್ರತಂಡದ ತಂತ್ರಜ್ಞ ರಘು ಎಸ್ ರವರು ಹಾಜರಿದ್ದರು. ನಂತರ ನಡೆದ ಚಲನಚಿತ್ರ ಆಡಿಷನ್ ಲ್ಲಿ 30 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇದೇ 5 ನೇ ತಾರೀಕಿಗೆ ಚಿತ್ರದ ಮೂಹೂರ್ತ ಕಾರ್ಯಕ್ರಮವು ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ನಡೆಯಲಿದೆ. ಸತತವಾಗಿ 21 ದಿನಗಳ ಕಾಲ ಚಿತ್ರೀಕರಣ ಸುಳ್ಯದ ಸುತ್ತಮುತ್ತ ನಡೆಯಲಿದೆ ಎಂದು ಚಿತ್ರನಿರ್ದೇಶಕ ಸಂತೋಷ್ ಕೋಡಂಕೇರಿ ಅವರು ಹೇಳಿದರು. 4-9-2022 ರಂದು ಭಾನುವಾರ ಕೂಡ 30 ವರ್ಷಗಳಿಂದ 50 ವರ್ಷದ ಒಳಗಿನ ಕಲಾವಿದರಿಗೆ 2 ನೆಯ ಆಡಿಷನ್ ಕಾರ್ಯಕ್ರಮ ನಡೆಯಲಿದೆ. ಆಡಿಷನ್ ನಿರ್ವಹಣೆ ಮಾಡಿದ ವಸಂತ್ ಆಚಾರ್ಯ ಕಾಯರ್ತೋಡಿರವರು ವಂದನಾರ್ಪಣೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment