ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವ್ಯಕ ಮಂಡಲ ಗುಂಪೆ ವಲಯ ಸಭೆ

ಹವ್ಯಕ ಮಂಡಲ ಗುಂಪೆ ವಲಯ ಸಭೆ




ಬದಿಯಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ಸೆ.11ರಂದು ಭಾನುವಾರ  ಶಂಕರನಾರಾಯಣ ಭಟ್ ನೇರೋಳು ಇವರ ನಿವಾಸವಾದ ಸಾತ್ವಿಕ ನಿಲಯದಲ್ಲಿ ನಡೆಯಿತು.


ಉಷಾಪದ್ಮ ನೇರೋಳು ದೀಪ ಪ್ರಜ್ವಲನೆ, ಶಂಕರನಾರಾಯಣ ಭಟ್ ನೇರೋಳು ಧ್ವಜಾರೋಹಣ ಮಾಡಿದರು. ಶಂಖನಾದ ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.


ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿದರು. ವಲಯ ಕೋಶಾಧಿಕಾರಿ ರಾಜಗೋಪಾಲ ಅಮ್ಮಂಕಲ್ಲು ಆಗಸ್ಟ್ ತಿಂಗಳ ಲೆಕ್ಕಪತ್ರವನ್ನು ಮಂಡಿಸಿದರು. ವೈದಿಕ ಪ್ರಧಾನರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಉಪಾಸನಾ ವಿವರಗಳನ್ನು ನೀಡಿದರು. ಇತರ ವಿಭಾಗವಾರು ವರದಿಯನ್ನು ಸಲ್ಲಿಸಲಾಯಿತು.


ಸಾತ್ವಿಕಕೃಷ್ಣ ನೇರೊಳು ಗುರುಕುಲ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಗುರುಗಳಿಂದ ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ ಬಗ್ಗೆ ಮಾಹಿತಿ ನೀಡಲಾಯಿತು.


ಕರ್ವಜೆ ವೆಂಕಟ್ರಮಣ ಭಟ್ಟರ ಕುಟುಂಬಕ್ಕೆ ಸಹಾಯ ವಿಭಾಗದಿಂದ ಆರ್ಥಿಕ ಸಹಾಯ ನೀಡಿದ ವಿಚಾರವನ್ನು ತಿಳಿಸಿ ಸಹಕಾರ ನೀಡಿದ ಶಿಷ್ಯಬಂಧುಗಳಿಗೂ, ಸೇವಾರೂಪದಲ್ಲಿ ಶಾಕಪಾಕಾದಿಗಳನ್ನು ತಯಾರಿಸಿಕೊಟ್ಟ ಗೋಪಾಲಕೃಷ್ಣ ಭಟ್ ನೆಕ್ಕರಕಾಡು ಇವರಿಗೂ ಕೃತಜ್ಞತೆ ಸಲ್ಲಿಸಲಾಯಿತು.


ವೀಕ್ಷಕರಾಗಿ ಉಪಸ್ಥಿತರಿದ್ದ ಮಂಡಲ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಗುರುಕುಲ ಚಾತುರ್ಮಾಸ್ಯದಲ್ಲಿ ಸೇವಾರೂಪದಲ್ಲಿ ಸಪ್ತಶತಿ ಪಾರಾಯಣ ಮಾಡಿದ ವೈದಿಕ ವಿಭಾಗ, ಸೇವಾರೂಪದಲ್ಲಿ ಪಾಕತಜ್ಞರು ನೀಡಿದ ಸೇವೆ ಹಾಗೂ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿದ ಕಾರ್ಯಕರ್ತರ, ಶಿಷ್ಯಬಂಧುಗಳ ಸಹಕಾರಗಳನ್ನು ನೆನಪಿಸಿಕೊಂಡರು. ಚಾತುರ್ಮಾಸ್ಯದ ಸಂದರ್ಭದ ಎಲ್ಲಾ ದಿನಗಳಲ್ಲೂ ಶ್ರೀಪರಿವಾರದ ಊಟೋಪಚಾರದ ವ್ಯವಸ್ಥೆಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಭುವನೇಶ್ವರಿ ಬಾಳಿಕೆ ಇವರ ಸೇವಾಕಾರ್ಯ ಹಾಗೂ ಗುಂಪೆವಲಯದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. 


ಸಭಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ಶ್ರಾವಣಕೆರೆ ಮಾಣಿಮಠದ ಶಿಲಾಮಯ ಗರ್ಭಗುಡಿ ನಿರ್ಮಾಣದ ಯಶಸ್ಸಿಗಾಗಿ ಪ್ರತೀ ಮನೆಯಲ್ಲೂ ರಾಮತಾರಕ ಮಂತ್ರ ಜಪಿಸುವಂತೆ ಕರೆನೀಡಿದರು. ಗುರುಕುಲ ಚಾತುರ್ಮಾಸ್ಯದ ಸಂದರ್ಭದಲ್ಲಿ ನಡೆದ ಗುರಿಕ್ಕಾರರ ಸಮಾವೇಶ, ಯುವಸಮಾವೇಶ ಗುಂಪೆ ವಲಯಭಿಕ್ಷೆ ಹಾಗೂ ಸೀಮೋಲ್ಲಂಘನದಸಂದರ್ಭದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶಿಷ್ಯಬಾಂಧವರು ಅಶೋಕೆಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.


ಇತ್ತೀಚೆಗೆ ರಾಮಪಾದ ಸೇರಿದ ವಿಷ್ಣು ಭಟ್ ಕರ್ವಜೆ ಮತ್ತು ಜೆಡ್ಡು ಸಾವಿತ್ರಿ ಅಮ್ಮ ಎಡಕ್ಕಾನ ಇವರ ವಿಷ್ಣುಸಾಯೂಜ್ಯ ಪ್ರಾಪ್ತಿಗಾಗಿ ಸಭೆಯಲ್ಲಿ ರಾಮತಾರಕ ಮಂತ್ರವನ್ನು ಪಠಿಸಲಾಯಿತು.


ಸಭೆ ನಡೆಸಲು ಸ್ಥಳಾವಕಾಶ ಒದಗಿಸಿಕೊಟ್ಟ ನೇರೋಳು ಮನೆಯವರಿಗೆ ಧನ್ಯವಾದ ಸಮರ್ಪಣೆ ಮಾಡಲಾಯಿತು. ಗುರಿಕ್ಕಾರರು, ಪದಾಧಿಕಾರಿಗಳು, ಶ್ರೀಕಾರ್ಯಕರ್ತರು ಹಾಗೂ ಶಿಷ್ಯಬಂಧುಗಳು ಉಪಸ್ಥಿತರಿದ್ದ ಸಭೆಯು ರಾಮತಾರಕ ಮಂತ್ರ, ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post