ಮಂಗಳೂರು: ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿದ್ದ ಹಿನ್ನೆಲೆ ಹಾಕಿದ್ದ ಸಿಸಿ ಕ್ಯಾಮರ ಮತ್ತು ತಂತಿ ತಡೆಬೇಲಿ ಧ್ವಂಸಗೈದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಡ್ಯಾರ್ ಸಾಯಿ ನಗರ ನಿವಾಸಿ ಸೂರಜ್ , ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್ ,ತಲಪಾಡಿ ನಿವಾಸಿ ಅಖಿಲ್ ,ಸೋಮೇಶ್ವರ ನಿವಾಸಿ ಪ್ರಜ್ವಲ್ ಬಂಧಿತರು ಅವರು ಕೃತ್ಯಕ್ಕೆ ಬಳಸಿದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸೋಮೇಶ್ವರ ದೇವಸ್ಥಾನ ಬಳಿಯಿಂದ ಮತ್ತು ಗಡಿಭಾಗ ಮೂಡ ಲೇಔಟ್ ಬಳಿಯ ಸಮುದ್ರದಿಂದ ನಿರಂತರವಾಗಿ ಮರಳು ಸಾಗಟ ಅಕ್ರಮವಾಗಿ ನಡೆಯುತ್ತಿತ್ತು ,ಸ್ಥಳೀಯರ ವಿರೋಧದ ನಡುವೆ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಬೀಚ್ ಬದಿಯ ಸಮುದ್ರಕ್ಕೆ ಘನ ವಾಹನಗಳು ತೆರಳದಂತೆ ತಂತಿಬೇಲಿಯನ್ನು ಹಾಕಲಾಗಿತ್ತು ಮತ್ತು ಸಿಸಿ ಕೆಮರಾಗಳನ್ನು ಅಳವಡಿಸಲಾಗಿತ್ತು .
ಸಿಸಿ ಕ್ಯಾಮರಾ ಅಳವಡಿಕೆ ಮರಳುಗಳ್ಳರಿಗೆ ತೊಂದರೆಯಾಗಿದ್ದು ಮರಳು ಸಾಗಾಟ ದಾರರು ಯುವಕರು ಮುಸುಕುಧಾರಿಗಳಾಗಿ ಕಳುಹಿಸಿ ಕೃತ್ಯ ನಡೆಸಿದ್ದರು.
ಘಟನೆಯಿಂದ ಸುಮಾರು ಎಪ್ಪತ್ತೈದು ಸಾವಿರ ನಷ್ಟ ಅಂದಾಜಿಸಲಾಗಿದೆ , 1 ಸಿಸಿ ಕ್ಯಾಮೆರಾವನ್ನು ಟಿಪ್ಪರ್ ಮೂಲಕ ಧ್ವಂಸ ಮಾಡುವ ಚಿತ್ರಣ ವೈಫೈ ಮೂಲಕ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು ಉಳ್ಳಾಲ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment