ಹೈದರಾಬಾದ್ : ದುರ್ಗಾ ಮೂರ್ತಿಯ ಮೇಲೆ ದಾಳಿ ಮಾಡಿದ ಆರೋಪದಲ್ಲಿ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರನ್ನು ಬಂಧಿಸಲಾಯಿತು.
ಹೈದರಾಬಾದ್ ಖೈರತಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಮೊದಲು ಚರ್ಚ್‌ಗೆ ನುಗ್ಗಿದ ಮಹಿಳೆಯರು ಅಲ್ಲಿರುವ ಮೇರಿ ಪ್ರತಿಮೆಯನ್ನು ದ್ವಂಸ ಮಾಡುವುದಕ್ಕೆ ಪ್ರಯತ್ನ ಮಾಡಿದರು.
ಬಳಿಕ ನವರಾತ್ರಿ ಪ್ರಯುಕ್ತ ಹಾಕಲಾಗಿದ್ದ ದುರ್ಗಾಮಾತೆಯ ಪೂಜಾ ಪೆಂಡಲ್‌ಗೆ ನುಗ್ಗಿ ಮೂರ್ತಿಯ ಮೇಲೆ ದಾಳಿ ಮಾಡಿದ್ದಾರೆ.
ಇವರನ್ನು ಅಲ್ಲಿನ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಇಬ್ಬರೂ ಮಾನಸಿಕ ಅಸ್ವಸ್ಥರು ಅಂತ ಕೂಡ ಹೇಳಲಾಗುತ್ತಿದೆ.
Post a Comment