ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಆನಂದ್ ಅಹುಜಾ ತಮ್ಮ ನವಜಾತ ಮಗನಿಗೆ ವಾಯು ಎಂದು ನಾಮಕರಣ ಮಾಡಿದ್ದಾರೆ.
ಸೋನಂ ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮ ನೀಡಿದರು. ತಂದೆಯಾದ ಖುಷಿಯಲ್ಲಿ ಆನಂದ್ ಮತ್ತು ತಾತ ಅನಿಲ್ ಕಪೂರ್ ಇಡೀ ಆಸ್ಪತ್ರೆಗೆ, ಕ್ಯಾಮರಾ ಮ್ಯಾನ್ ಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು.
ಇದೀಗ ಮಗುವಿನ ನಾಮಕರಣ ಶಾಸ್ತ್ರ ನೆರವೇರಿಸಿರುವ ದಂಪತಿ ವಾಯು ಕಪೂರ್ ಅಹುಜಾ ಎಂದು ಹೆಸರಿಸಿದ್ದಾರೆ.
ವಾಯು ಹಿಂದೂ ಧರ್ಮ ಗ್ರಂಥದ ಪ್ರಕಾರ ಪಂಚಭೂತಗಳಲ್ಲಿ ಒಂದು, ವಾಯು ಉಸಿರಾಟಕ್ಕೆ ದೇವರು, ಹನುಮಂತನ ತಂದೆ ಹೆಸರು. ಈ ಕಾರಣಕ್ಕೆ ಈ ಹೆಸರು ನೀಡಲಾಗಿದೆ' ಎಂದು ಸೋನಂ ವಿವರಣೆ ನೀಡಿದ್ದಾರೆ.
Post a Comment