ಯಮಕನಮರಡಿ (ಬೆಳಗಾವಿ ಜಿಲ್ಲೆ): ಗಣೇಶ ಚತುರ್ಥಿಯ ದಿನ, ಗೌರಿ ಮೂರ್ತಿ ತರುವ ವಿಚಾರವಾಗಿ ಅಕ್ಕ- ತಂಗಿಯರ ಮಧ್ಯೆ ಜಗಳ ನಡೆದು, 15 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆಯಿತು.
ಯಮಕನಮರಡಿಯ ರುಕ್ಮಿಣಿ ರವೀಂದ್ರಕುಮಾರ ತೇಗೂರಿ (15) ಸಾವನ್ನಪ್ಪಿದವರು.
ಪ್ರತಿ ವರ್ಷ ಇವರ ತಂಗಿ ಗೌರಿ ಮೂರ್ತಿ ತರುವ ಅಭ್ಯಾಸ ಇಟ್ಟುಕೊಂಡಿದ್ದರು. ಇದೇ ವಿಚಾರವಾಗಿ ಶನಿವಾರ ಅಕ್ಕ- ತಂಗಿಯರ ಮಧ್ಯೆ ಜಗಳ ನಡೆಯಿತು.
ಇದರಿಂದ ಮನನೊಂದ ರುಕ್ಮಿಣಿ ಮನೆಯಲ್ಲಿಯೇ ಸೀರೆಯಿಂದ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment