ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಂಡ ಹೆಂಡತಿ ಜಗಳ ಬಿಡಿಸಲು ಹೋದ ವ್ಯಕ್ತಿಯ ಭೀಕರ ಕೊಲೆ

ಗಂಡ ಹೆಂಡತಿ ಜಗಳ ಬಿಡಿಸಲು ಹೋದ ವ್ಯಕ್ತಿಯ ಭೀಕರ ಕೊಲೆ

 


ವಿಜಯಪುರ: ಗಂಡ ಹೆಂಡತಿಯ ಜಗಳ ಬಿಡಿಸಲು ಮಧ್ಯ ಬಂದವನೇ ಭೀಕರವಾಗಿ ಕೊಲೆಯಾದ ಘಟನೆಯೊಂದು ಜಿಲ್ಲೆಯ ಗುರುಪಾದೇಶ್ವರ ನಗರದಲ್ಲಿ ನಡೆದಿದೆ.

ಪರುಶರಾಮ ಅಬಟೇರಿ (30) ಮೃತಪಟ್ಟ ದುರ್ದೈವಿ.


ಮೂಲತಃ ಬಾಗಲಕೋಟೆ ಜಿಲ್ಲೆಯ ಅಚನೂರು ಗ್ರಾಮದ ನಿವಾಸಿಯಾಗಿದ್ದ ಪರಶುರಾಮ ವಿಜಯಪುರದ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕಳೆದ 15 ದಿನಗಳ ಹಿಂದೆ ಗುರುಪಾದೇಶ್ವರ ನಗರದ ಕೆಇಬಿ ನಿವೃತ್ತ ನೌಕರ ಈಜೇರಿ ಎಂಬವರ ಮನೆಯಲ್ಲಿ ಪತ್ನಿಯೊಂದಿಗೆ ಬಾಡಿಗೆಗೆ ವಾಸವಾಗಿದ್ದ, ಹಬ್ಬಕ್ಕಾಗಿ ಪತ್ನಿ ತವರಿಗೆ ಹೋಗಿದ್ದರು.


ನಿನ್ನೆ ಸಂಜೆ 4:30ರ ವೇಳೆಗೆ ಮನೆಯ ಮಾಲೀಕನ ಮಗ ಮತ್ತು ಆತನ ಹೆಂಡತಿ ಜಗವಾಡುತ್ತಿದ್ದರು. ಜಗಳ ಬಿಡಿಸಲು ಪರುಶರಾಮ ಹೋಗಿದ್ದಾನೆ.

ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಹೆಂಡತಿಯ ಸಂಬಂಧಿಕರು ಪರಶುರಾಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಪರಶುರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post