ಸುಬ್ರಹ್ಮಣ್ಯ: ಭಾರೀ ಮಳೆ ಸುರಿಯುತ್ತಿರುವ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಪರ್ವತಮುಖಿ ನಿವಾಸಿ ಮೂಲತಃ ಪಂಜದ ಕರಿಮಜಲು ಕುಸುಮಾಧರ ಅವರ ಮನೆಯ ಮೇಲೆ ಗುಡ್ಡ ಕುಸಿದಿದ್ದು, ಅವರ ಮಕ್ಕಳಾದ ಶ್ರುತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಕೊಂಡಿದ್ದರು.
ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಕ್ಕಳನ್ನು ಪರೀಕ್ಷಿಸಿದ ವೈದ್ಯರು, ಮಕ್ಕಳು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಮನೆಯಲ್ಲಿ ಒಟ್ಟು ಐವರು ಇರುತ್ತಿದ್ದರು. ಘಟನೆ ನಡೆದ ಸಂದರ್ಭ ತಂದೆ ಅಂಗಡಿಗೆ ಹೋಗಿದ್ದರು. ತಾಯಿ ರೂಪಾಶ್ರೀ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದರು.
ಮೃತ ಮಕ್ಕಳ ತಂದೆ ಕುಸುಮಾಧರ ಅವರು ಸುಬ್ರಹ್ಮಣ್ಯದ ಸರಕಾರಿ ಆಸ್ಪತ್ರೆ ಬಳಿ ಸಣ್ಣ ಅಂಗಡಿ ನಡೆಸುತ್ತಿದ್ದರು.
Post a Comment