ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆ: ರಕ್ತದಾನ ಶಿಬಿರ

ನಿಟ್ಟೆ: ರಕ್ತದಾನ ಶಿಬಿರ


ನಿಟ್ಟೆ: ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ರೆಡ್ಡ್ ರಿಬ್ಬನ್ ಕ್ಲಬ್, ಯುವ ರೆಡ್ಢ್ ಕ್ರಾಸ್ ಘಟಕಗಳು, ರೋಟರಿ ಕ್ಲಬ್ ಬೆಳ್ಮಣ್ಣು,  ರಕ್ತನಿಧಿ ಜಿಲ್ಲಾಸ್ಪತ್ರೆ ಉಡುಪಿ, ನಿಟ್ಟೆ - ಗಾಜ್ರಿಯಾ ಸ್ಪೇಷಾಲಿಟಿ ಆಸ್ಪತ್ರೆ ಕಾರ್ಕಳ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ ಇವರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜ್ ಜು.27 ರಂದು ಹಮ್ಮಿಕೊಂಡಿತ್ತು.


ಈ ಶಿಬಿರವನ್ನು ರಕ್ತನಿಧಿ ಜಿಲ್ಲಾಸ್ಪತ್ರೆ ಉಡುಪಿ ಇದರ ನಿರ್ದೇಶಕರಾದ ಡಾ| ವೀಣಾ ಉದ್ಘಾಟಿಸಿ ರಕ್ತದಾನದ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ಜಿಲ್ಲೆ 3182ರ ವಲಯ5ರ ಮಾಜಿ ಸಾಹಯಕ ಗವರ್ನರ್ ಸೂರ್ಯಕಾಂತ ಶೆಟ್ಟಿ ಅವರು ನಿಟ್ಟೆ ವಿದ್ಯಾ ಸಂಸ್ಥೆಗಳು ರೋಟರಿ ಕ್ಲಬ್ ಬೆಳ್ಮಣ್ಣಿಗೆ ನೀಡುವ ಸಹಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಲಯನ್ಸ್ ಜಿಲ್ಲಾ ಪ್ರಾಂತೀಯ ನಿರ್ದೇಶಕರಾದ ಲಯನ್ ಗಂಗಾಧರ್ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ವೀಣಾ ಕುಮಾರಿ ಬಿ ಕೆ ವಹಿಸಿ ರೋಟರಿ ಸಂಸ್ಥೆ ಬೆಳ್ಮಣ್ಣು ಹಾಗೂ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.


ವೇದಿಕೆಯಲ್ಲಿ ರೋಟರಿ ಕ್ಲಬ್ ಬೆಳ್ಮಣ್ಣಿನ ಅಧ್ಯಕ್ಷ ರೋ|ನಿತ್ಯಾನಂದ ಶೆಟ್ಟಿ, ಲಯನ್ಸ್ ಕ್ಲಬ್ ಹಿರಿಯಡ್ಕದ ಅಧ್ಯಕ್ಷ ರವೀಂದ್ರನಾಥ್ ಹೆಗ್ಡೆ ವಲಯ ಸೇನಾನಿ ವಿಘ್ನೇಶ್ ಶೆಣೈ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಾದ ಭರತ್ ಎಸ್ ಭಟ್ಟ್, ಅನುಷಾ ಆಚಾರ್ಯ, ಯುವ ರೆಡ್ಢ್ ಕ್ರಾಸ್ ಘಟಕದ ಅಧಿಕಾರಿಗಳಾದ ಶ್ರೀಮತಿ ರಶ್ಮಿ, ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಶುಭಕರ್ ಅಂಚನ್ ಉಪಸ್ಥಿತರಿದ್ದರು.


ಬಳಿಕ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ  ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸ್ವಯಂಸೇವಕರು ಹಾಗೂ ಅಧ್ಯಾಪಕವೃಂದದವರು ಸುಮಾರು 200ಯೂನಿಟ್ ರಕ್ತದಾನವನ್ನು ಮಾಡಿ ಶಿಬಿರವನ್ನು ಯಶಸ್ವಿಯಾಗಿಸಿದರು. ಈ ಕಾರ್ಯಕ್ರಮವನ್ನು ನಿಧಿ ಸಾಲ್ಯಾನ್ ನಿರೂಪಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಮಂತ್ ಕಾಮತ್ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post