ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿದ್ದರಾಮಯ್ಯ ಅವರ ಕಾರ್ಯಕ್ರಮ ಕ್ಕೆ ಹೋದ ಶಾಸಕ ಎಂ.ವೈ.ಪಾಟೀಲ್ ಜಾರಿ ಬಿದ್ದು ; ಆಸ್ಪತ್ರೆ ದಾಖಲು

ಸಿದ್ದರಾಮಯ್ಯ ಅವರ ಕಾರ್ಯಕ್ರಮ ಕ್ಕೆ ಹೋದ ಶಾಸಕ ಎಂ.ವೈ.ಪಾಟೀಲ್ ಜಾರಿ ಬಿದ್ದು ; ಆಸ್ಪತ್ರೆ ದಾಖಲು

 


ಹುಬ್ಬಳ್ಳಿ: ಬೆಳಗ್ಗೆ ಸ್ನಾನ ಮಾಡಲು ಹೋದಾಗ ಸಂಧರ್ಭದಲ್ಲಿ ಜಾರಿಬಿದ್ದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ.


ಹುಬ್ಬಳ್ಳಿಯ ಸರ್ಕಿಟ್ ಹೌಸ್​ನಲ್ಲಿ ಬೆಳ್ಳಂಬೆಳಗ್ಗೆ ಘಟನೆ ನಡೆದಿದೆ. ಸ್ನಾನ ಮಾಡಲು ಹೋದಾಗ ಜಾರಿಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ.


ಶಾಸಕರು ಬೆಂಬಲಿಗರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಶಾಸಕ ಎಂ.ವೈ.ಪಾಟೀಲ್ ನಿನ್ನೆಯಷ್ಟೇ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತೆರಳಿದ್ದರು. ವಾಪಸ್​ ಊರಿಗೆ ತೆರಳುವ ಸಲುವಾಗಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ


0 Comments

Post a Comment

Post a Comment (0)

Previous Post Next Post