ದಾವಣಗೆರೆ : ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ಘಟಕ ವ್ಯವಸ್ಥಾಪಕ ಎಚ್.ಸಿ. ತುಷಾರ್ (33) ಶುಕ್ರವಾರ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಂಸ್ಥೆಯ ಸಿಬ್ಬಂದಿಯ ಹಳೆ ಪ್ರಕರಣವೊಂದರ ವಿಚಾರಣೆ ಸಂಬಂಧ ಶಿರಸಿಗೆ ಬಂದಿದ್ದ ಅವರು, ಬೆಂಗಳೂರಿಗೆ ವಾಪಸ್ಸಾಗುವಾಗ ಮಾರ್ಗ ಮಧ್ಯೆ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ನಿಧನರಾಗಿದ್ದಾರೆ.
ತಲೆ ಸುತ್ತು ಕಾಣಿಸಿಕೊಂಡು ಆಯಾಸಗೊಂಡಿದ್ದ ಅವರನ್ನು ಬಸ್‌ನ ನಿರ್ವಾಹಕರು ಆಸ್ಪತ್ರೆಗೆ ಕರೆದೊಯ್ಯಲು ಅಣಿಯಾಗುತ್ತಿದ್ದಂತೆಯೇ, ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರಿಗೆ ಪತ್ನಿ ಹಾಗೂ 4 ತಿಂಗಳ ಮಗು ಇದ್ದು, ಮೃತದೇಹವನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಎಂಬ ಮಾಹಿತಿ ದೊರಕಿವೆ.
Post a Comment