ಗುರುಪುರ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ `ಹರ್ ಘರ್ ತಿರಂಗಾ' ಕಾರ್ಯಕ್ರಮದ ಪ್ರಯುಕ್ತ ಮಂಗಳೂರು ಬಿಜೆಪಿ ಉತ್ತರ ಮಂಡಲದ ಗುರುಪುರ ಮಹಾಶಕ್ತಿ ಕೇಂದ್ರ ಸಹಯೋಗದೊಂದಿಗೆ, ಗುರುಪುರ ಮತ್ತು ಅಡ್ಡೂರು ಶಕ್ತಿ ಕೇಂದ್ರದ ವತಿಯಿಂದ ಶುಕ್ರವಾರ (ಆ.12) ಸಂಜೆ ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ದೈವಸ್ಥಾನದ ಮಹಾದ್ವಾರದಿಂದ ಕೈಕಂಬ ಮಾರ್ಗವಾಗಿ ಪೊಳಲಿ ಹಾಗೂ ಪೊಳಲಿಯಿಂದ ಗುರುಪುರದವರೆಗೆ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ಕುಕ್ಕುದಕಟ್ಟೆಯಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿ ಸ್ವತಃ ಗುರುಪುರದಿಂದ ಪೊಳಲಿಯಾಗಿ ಗುರುಪುರದವರೆಗೆ ಬೈಕ್ ರ‍್ಯಾಲಿ ನಡೆಸಿದರು. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಹಿರಿಯ ಮುಖಂಡ ಪುರಂದರ ಮಲ್ಲಿ, ಬಜರಂಗ ದಳ ಮುಖಂಡ ಭುಜಂಗ ಕುಲಾಲ್ ಹಾಗೂ ಬಿಜೆಪಿ ಉತ್ತರ ಮಂಡಲ, ಗುರುಪುರ ಮಹಾಶಕ್ತಿ ಕೇಂದ್ರ, ಗುರುಪುರ ಹಾಗೂ ಅಡ್ಡೂರು ಶಕ್ತಿ ಕೇಂದ್ರಗಳ ಪದಾಧಿಕಾರಿಗಳು, ಗುರುಪುರ ಗ್ರಾಮ ಪಂಚಾಯತ್‌ನ ಬಿಜೆಪಿ ಬೆಂಬಲಿತ ಸದಸ್ಯರು, ಪಕ್ಷ ನಾಯಕರು, ಕಾರ್ಯಕರ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು ಹಾಗೂ ನೂರಾರು ಮಂದಿ ರಾಷ್ಟ್ರಭಕ್ತರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ರ‍್ಯಾಲಿಯುದ್ದಕ್ಕೂ ರಾಷ್ಟ್ರ ಪ್ರೇಮದ ಘೋಷಣೆಗಳು ಕೇಳಿ ಬಂತು. ಅಲ್ಲಲ್ಲಿ ಮಹಿಳೆಯರು, ವಯೋವೃದ್ಧರು, ಮಕ್ಕಳು ಮತ್ತು ಇತರ ನಾಗರಿಕ ಬಂಧುಗಳು ರಾಷ್ಟ್ರಧ್ವಜಕ್ಕೆ ಹೂವಿನ ಪಕಳೆ ಚೆಲ್ಲಿ ವಿಶೇಷ ಗೌರವ ಸಲ್ಲಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment